ಗೌರಿ ಲಂಕೇಶ್ ಹತ್ಯೆ ಶಂಕಿತ ಹಂತಕ ಬಂಧನ..

ಗೌರಿ ಲಂಕೇಶ್ ಹತ್ಯೆ ಶಂಕಿತ ಹಂತಕ ಬಂಧನ..

238
0
SHARE

ಬೆಂಗಳೂರು(ಮಾ.2.2018): ದೇಶದಲ್ಲಿ ಆತಂಕ ಸೃಷ್ಟಿಸಿದ್ದ ಪತ್ರಕರ್ತೆ, ವಿಚಾರವಾದಿ ಗೌರಿ ಲಂಕೇಶ್ ಹತ್ಯೆಯ ಶಂಕಿತ ಆರೋಪಿಗಳಲ್ಲಿ ಪ್ರಮುಖನಾದವನನ್ನು ಎಸ್ಐಟಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಹೊಟ್ಟೆ ಮಂಜ ಅಲಿಯಾಸ್ ಕೆ.ಟಿ.ನವೀನ್ ಎಂಬಾತನನ್ನು ಬಂಧಿಸಲಾಗಿದೆ. ಆರೋಪದಲ್ಲಿ ಹಿನ್ನಲೆಯಲ್ಲಿ 7 ದಿನ ಸ್’ಐಟಿ ವಶಕ್ಕೆ ನೀಡಲಾಗಿದೆ.  ಶಂಕಿತ ನವೀನ್ ಗೌರಿ ಹತ್ಯೆ ಆರೋಪಿಗಳಿಗೆ ಆಯುಧ ಪೂರೈಸಿದ್ದ. ಫೆ.18ರಂದು ಈತನನ್ನು ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಉಪ್ಪಾರಪೇಟೆ ಪೊಲೀಸರು ಮೆಜಸ್ಟಿಕ್ ಬಸ್ ನಿಲ್ದಾಣದಲ್ಲಿ ಬಂಧಿಸಿದ್ದರು.

ಗೌರಿ ಹತ್ಯೆಯಲ್ಲಿ ಆರೋಪಿ ಕೈವಾಡ ಇರುವ ಶಂಕೆ ಹಿನ್ನಲೆಯಲ್ಲಿ ಮೂರನೇ ಎಸಿಎಮ್​ಎಮ್​ ನ್ಯಾಯಾಲಯಕ್ಕೆ ಹಾಜರು ಪಡಿಸಿದ ಎಸ್​ಐಟಿ ಅಧಿಕೃತವಾಗಿ ವಶಕ್ಕೆ ಪಡೆದಿದ್ದರು. ಸೆ.05ರಂದು ಗೌರಿ ಲಂಕೇಶ್ ಹತ್ಯೆ ಆಯುಧ ಪೂರೈಸಿದ್ದ. ಗೌರಿ ಅವರ ಹತ್ಯೆಯಾದ ನಂತರ ಗುಂಡು ಹಾರಿಸಿದವರ ಜೊತೆ ಸಭೆ ನಡೆಸಿದ್ದ.

ಗೌರಿ ಹತ್ಯೆಗೆ ಸೆಪ್ಟೆಂಬರ್’ನಲ್ಲಿಯೇ 2 ಬಾರಿ ಸ್ಕೆಚ್ ಹಾಕಲಾಗಿತ್ತು ಎರಡೂ ಬಾರಿ ವಿಫಲವಾದ ಕಾರಣ ಮೂರನೇ ಬಾರಿ ಯತ್ನಿಸಿ ಗೌರಿ ಅವರ ಮನೆಯ ಮುಂದೆಯೆ ಗುಂಡು ಹಾರಿಸಿತ್ತು.

ಬಂಧನ ತಡವಾಗಿದ್ದು ಯಾಕೆ ? ಮತ್ತೊಬ್ಬ ವಿಚಾರವಾದಿ ಹತ್ಯೆಗೆ ಸ್ಕೆಚ್ !

2 ತಿಂಗಳ ಹಿಂದಯೇ ಈತನ ಬಂಧನವಾಗಬೇಕಿತ್ತು. ಆದರೆ ಎಸ್’ಐಟಿ ಮುಖ್ಯಸ್ಥರಾದ ಬಿ.ಕೆ.ಸಿಂಗ್ ಅವರು ಇನ್ನಷ್ಟು ಸಾಕ್ಷಿ ತನ್ನಿ ಎಂದಿದ್ದರು. ಈ ಕಾರಣಕ್ಕೆ ಬಂಧನ ವಿಳಂಬವಾಗಬೇಕಿತ್ತು. ಗೌರಿ ಹತ್ಯೆ ಬಳಿಕ ಚಿಂತಕ ಭಗವಾನ್ ಅವರ ಹತ್ಯೆಗೂ ಇದೆ ಟೀಮ್ ಸ್ಕೆಚ್ ಹಾಕಿತ್ತು. ಆದರೆ ಸಮಯಕ್ಕೆ ಸರಿಯಾಗಿ ಗನ್ ಪೂರೈಕೆಯಾಗದ ಹಿನ್ನೆಲೆಯಲ್ಲಿ ಸ್ಕೇಚ್ ವಿಫಲವಾಗಿತ್ತು. ಇಲ್ಲದಿದ್ದರೆ ಫೆಬ್ರವರಿ 12 ಮತ್ತು ಫೆಬ್ರವರಿ 13 ರಂದು ಈ ವ್ಯಕ್ತಿಯೇ ಕೊಲೆಯಾಗಬೇಕಿತ್ತು.

ಹಂತಕರಿಗೆ ಮದ್ದೂರಿನ ಬೀರೂರಿನಲ್ಲಿ ಹಾಗೂ ಖಾಲಿ ಬಿಯರ್ ಬಾಟಲ್ ಗಳ ಮೇಲೆ ಫೈರ್ ಮಾಡಿ ತರಬೇತಿ ನೀಡಲಾಗಿತ್ತು. ನಂತರ ಕೊಳ್ಳೆಗಾಲದ ತೋಟದ ಮನೆಯಲ್ಲಿ ಮೀಟಿಂಗ್ ಮಾಡಿ ಬೆಂಗಳೂರಿಗೆ ಬಂದಿದ್ದರು.

NO COMMENTS

LEAVE A REPLY