ರೈಲ್ವೆ ಟಿಕೆಟ್‌ ದರದಲ್ಲಿ ಅಲ್ಪ ಪ್ರಮಾಣ ಇಳಿಕೆ..

ರೈಲ್ವೆ ಟಿಕೆಟ್‌ ದರದಲ್ಲಿ ಅಲ್ಪ ಪ್ರಮಾಣ ಇಳಿಕೆ..

164
0
SHARE

ಹೊಸದಿಲ್ಲಿ(ಮಾ.2.2018): ರೈಲ್ವೆ ಪ್ರಯಾಣಿಕರಿಗೆ ಒಂದು ಸಿಹಿ ಸುದ್ದಿ. ಡಿಜಿಟಲ್‌ ಸಾಧನ, ಡೆಬಿಟ್‌ಕಾರ್ಡ್‌, ಆನ್‌ಲೈನ್‌ ಮೂಲಕ ರೈಲ್ವೆ ಟಿಕೆಟ್‌ಗಳನ್ನು ಖರೀದಿಸುವ ಪ್ರಯಾಣಿಕರಿಗೆ ಮರ್ಚೆಂಟ್‌ ಡಿಸ್ಕೌಂಟ್‌ ದರವನ್ನು (ಎಂಡಿಆರ್‌) ವಿಧಿಸುವುದಿಲ್ಲ ಎಂದು ರೈಲ್ವೆ ಇಲಾಖೆ ಘೋಷಿಸಿದೆ. ಹೀಗಾಗಿ ರೈಲ್ವೆ ಟಿಕೆಟ್‌ ದರದಲ್ಲಿ ಅಲ್ಪ ಪ್ರಮಾಣದ ಇಳಿಕೆಯಾಗಲಿದೆ. 

” ರೈಲ್ವೆ ಟಿಕೆಟ್‌ ಖರೀದಿಯಲ್ಲಿ ಪ್ರಯಾಣಿಕರಿಗೆ ಎಂಡಿಆರ್‌ ಶುಲ್ಕಗಳು ಅನ್ವಯಿಸುವುದಿಲ್ಲ. ರೈಲ್ವೆ ಟಿಕೆಟ್‌ ಕೌಂಟರ್‌ ಅಥವಾ ಐಆರ್‌ಟಿಸಿ ವೆಬ್‌ಸೈಟ್‌ ಮೂಲಕ ಡೆಬಿಟ್‌ ಕಾರ್ಡ್‌ಗಳ ಮೂಲಕ ಟಿಕೆಟ್‌ ಖರೀದಿಯ ವೇಳೆ ಎಂಡಿಆರ್‌ ಶುಲ್ಕ ಇರುವುದಿಲ್ಲ. ಇದು 1 ಲಕ್ಷ ರೂ. ತನಕದ ಮೌಲ್ಯದ ಟಿಕೆಟ್‌ ಖರೀದಿಗೆ ಅನ್ವಯವಗಲಿದೆ” ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.

ಹಣಕಾಸು ಇಲಾಖೆಯು ಈಗಾಗಲೇ ಬ್ಯಾಂಕ್‌ಗಳಿಗೆ ಈ ಸಂಬಂಧ ಸೂಚನೆಗಳನ್ನು ನೀಡಿದೆ. ಡಿಜಿಟಲ್‌ ಹಾಗೂ ನಗದುರಹಿತ ವರ್ಗಾವಣೆಯನ್ನು ಉತ್ತೇಜಿಸುವ ಸಲುವಾಗಿ ಇಲಾಖೆ ಈ ಕ್ರಮ ತೆಗೆದುಕೊಂಡಿದೆ. ರೈಲ್ವೆ ಇಲಾಖೆಯು ಕಾಯ್ದಿರಿಸದ ಟಿಕೆಟ್‌ ವಿತರಣೆ (ಯುಟಿಎಸ್‌) ಪದ್ಧತಿಯಲ್ಲಿ ನೀಡುವ, ಕಾಯ್ದಿರಿಸದ ಟಿಕೆಟ್‌ಗಳಲ್ಲಿ ಪ್ರಾದೇಶಿಕ ಭಾಷೆಯನ್ನು ವ್ಯಾಪಕವಾಗಿ ಬಳಸಲು ಕೂಡ ನಿರ್ಧರಿಸಿದೆ.

NO COMMENTS

LEAVE A REPLY