ಮುಕ್ತ ವಿವಿ ಭ್ರಷ್ಟಾಚಾರದ ಬಹಿರಂಗ ಚರ್ಚೆಗೆ ಸಿದ್ದ: ಪ್ರೊ.ರಂಗಪ್ಪ

ಮುಕ್ತ ವಿವಿ ಭ್ರಷ್ಟಾಚಾರದ ಬಹಿರಂಗ ಚರ್ಚೆಗೆ ಸಿದ್ದ: ಪ್ರೊ.ರಂಗಪ್ಪ

173
0
SHARE

ಮೈಸೂರು: ಮಾಜಿ ಸಿಎಂ ವೀರಪ್ಪ ಮೊಯಿಲಿಅವರು ಹಿಂದಿನ ಕುಲಪತಿಗಳಿಂದ ಮುಕ್ತ ವಿವಿಯಲ್ಲಿ ಭ್ರಷ್ಟಾಚಾರ ನಡೆದಿದೆ. ಈ ಸಂಬಂಧ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕಿದೆ ಎಂದು ಹೇಳಿದ್ದಾರೆ. ಈ ಸಂಬಂಧ ಬಹಿರಂಗ ಚರ್ಚೆಗೆ ಸಿದ್ಧ ಇರುವುದಾಗಿ ಮಾಜಿ ಕುಲಪತಿ, ಚಾಮರಾಜ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರೊ.ಕೆ.ಎಸ್.ರಂಗಪ್ಪ ಸವಾಲು ಹಾಕಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವೀರಪ್ಪ ಮೊಯಿಲಿ ಅವರು ಸಿಎಂ ಆಗಿದ್ದವರು. ಅವರ ಮಾತಿನಿಂದ ನನಗೆ ನೋವಾಗಿದೆ. ಮಹಾಕಾವ್ಯ ಬರೆಯುವ ಸಂದರ್ಭದಲ್ಲಿ ಅವರು ಮುಕ್ತ ವಿವಿಯ ಅತಿಥಿ ಗೃಹದಲ್ಲಿ ತಂಗಿದ್ದರು. ಆಗ ಮುಕ್ತ ವಿವಿಯ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ವಿವಿಗೆ ಗೌರವ ತಂದಿದ್ದೀರಿ ಎಂದಿದ್ದರು. ನಾನು ಏಳೂವರೆ ವರ್ಷ ಕುಲಪತಿ ಆಗಿದ್ದವನು. ಈಗ ಅವರು ನನ್ನನ್ನು ಬೊಟ್ಟು ಮಾಡಿರುವುದು ಬೇಸರ ತರಿಸಿದೆ. ಅವರು ಸಿಎಂ ಆಗಿದ್ದಾಗ ಮಾಡಿದ್ದ ಕಾಯಿದೆಯಡಿ ಕೆಲಸ ಮಾಡಿದ್ದೆ‌ ಎಂದು ಹೇಳಿದರು.ಹತ್ತು ದಿನದ ಒಳಗಡೆ ಅವರು ಸೂಚಿಸಿದ ಸ್ಥಳದಲ್ಲಿ ಬಹಿರಂಗ ಚರ್ಚೆಗೆ ಸಿದ್ಧನಿದ್ದೇನೆ. ಮೊಯಿಲಿ ಅವರು ಕಾಯಿದೆ ಓದಿಕೊಂಡು ಬರಲಿ. ನಾನು ಕಾಯಿದೆ ಉಲ್ಲಂಘನೆ ಮಾಡಿದ್ದರೆ ಶಿಕ್ಷೆಗೆ ಒಳಪಡುತ್ತೇನೆ ಎಂದು ರಂಗಪ್ಪ ಹೇಳಿದರು.

ನಾನು ರಾಜಕೀಯ ಪ್ರವೇಶಿಸುವುದನ್ನು ಸಹಿಸದೆ ಈ ರೀತಿ ಹೇಳಿದ್ದರೆ ಅದು ತಪ್ಪಾಗುತ್ತದೆ. ಮುಕ್ತ ವಿವಿಯ ಕುರಿತು ಸದನದಲ್ಲಿ ಚರ್ಚೆ ಆಯಿತು. ಯಾವುದೇ ಕೋರ್ಟ್ ನನ್ನ ವಿರುದ್ಧ ತೀರ್ಪು ನೀಡಿಲ್ಲ. ನಾನು ಕುಲಪತಿ ಆಗಿ ನಿರ್ಗಮಿಸಿದ ಆರು ತಿಂಗಳ ಬಳಿಕವೂ ವಿವಿಗೆ ಯುಜಿಸಿಯ ಮಾನ್ಯತೆ ಇತ್ತು. ರಾಜ್ಯ ಸರಕಾರ ಸಿಐಡಿ ತನಿಖೆ ಮಾಡಿದೆ. ನಾನು ಮಂಪರು ಪರೀಕ್ಷೆಗೆ ಸಿದ್ಧ ಇದ್ದೇನೆ. ಕೆಲವರು ಏನೂ ಇಲ್ಲದೆ ಸಂಸ್ಥೆ ಕಟ್ಟಿದರು, ಅಂಥವರು ಮಂಪರು ಪರೀಕ್ಷೆಗೆ ಬರಲಿ ಎಂದು ಟೀಕಿಸಿದರು.

ಮುಕ್ತ ವಿವಿಯಲ್ಲಿ ಬೋಧಕೇತರ ಸಿಬ್ಬಂದಿಗಳ ನೇಮಕದಲ್ಲಿಅಕ್ರಮ ಆಗಿದ್ದರೆ ಈ ಕುರಿತು ಯಾವುದೇ ನೌಕರರು ಹೇಳಲಿ. ಮಂಪರು ಪರೀಕ್ಷೆಗೆ ನನಗಿಂತ ಹಿಂದಿನ, ನಂತರದ ಕುಲಪತಿಗಳು ಒಳಪಡಲಿ ಎಂದು ಆಗ್ರಹಿಸಿದರು. ವಿವಿಯಲ್ಲಿ ನಡೆಯುತ್ತಿರುವ ಕೆಟ್ಟ ವಿದ್ಯಮಾನಗಳ ಬಗ್ಗೆ ಹತ್ತು ದಿನಗಳಲ್ಲಿ ದಾಖಲೆ ನೀಡುತ್ತೇನೆ. ನಾನು ಓಡಿ ಹೋಗುವುದಿಲ್ಲ. ನಾವು ಅಧಿಕಾರಕ್ಕೆ ಬಂದರೆ ನಾಲ್ಕು ತಿಂಗಳಿನಲ್ಲಿ ಮಾನ್ಯತೆ ಸಮಸ್ಯೆಯನ್ನು ಬಗೆಹರಿಸಲಾಗುವುದು. ಈಗ ಇರುವವರಿಗೆ ಕಾಯಿದೆ ಬಗ್ಗೆ ಅರಿವಿಲ್ಲ. ವಿವಿಯನ್ನು ಹೇಗೆ ನಡೆಸಬೇಕು ಎನ್ನುವ ಕುರಿತು ಗೊತ್ತಿಲ್ಲ. ಮಾನ್ಯತೆ ಯಾಕೆ ನೀಡುತ್ತಿಲ್ಲ ಎಂದು ತಿಳಿದು ಕಾರ್ಯತತ್ಪರರಾಗುತ್ತಿಲ್ಲ, ‘ ಎಂದು ದೂರಿದರು. 

NO COMMENTS

LEAVE A REPLY