ಮಾಧ್ಯಮದವರ ಮೇಲೆ ಸಿಎಂ ಬೆಂಗಾವಲು ಪಡೆಯಿಂದ ಗೂಂಡಾಗಿರಿ.

ಮಾಧ್ಯಮದವರ ಮೇಲೆ ಸಿಎಂ ಬೆಂಗಾವಲು ಪಡೆಯಿಂದ ಗೂಂಡಾಗಿರಿ.

194
0
SHARE

ಬೆಂಗಳೂರು(ಮಾ.1.2018): ವರದಿ ಮಾಡಲು ತೆರಳಿದ್ದ ಮಾಧ್ಯಮದವರ ಮೇಲೆ ಮುಖ್ಯಮಂತ್ರಿಯ ಬೆಂಗಾವಲು ಪಡೆಯವರು  ಗೂಂಡಾಗಿರಿ ನಡೆಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಬೆಂಗಳೂರಿನಲ್ಲಿ ವಿವಿಧ ಕಾಮಗಾರಿಗಳನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟನೆ ಮಾಡಿದರು. ಈ ನಡುವೆ ಓಕಳೀಪುರಂ ಮೇಲ್ಸೆತುವೆ ಉದ್ಘಾಟನೆ ವೇಳೆ ಈ ಘಟನೆ ನಡೆದಿದೆ. ಶಂಕು ಸ್ಥಾಪನೆ ನೆರವೇರಿಸಿ ಸಿಎಂ ಸಿದ್ದರಾಮಯ್ಯ ಬಸ್ ಹತ್ತಿದ ವೇಳೆ ವರದಿಗಾಗಿ ಬಸ್ ನತ್ತ ಮಾಧ್ಯಮ ಪ್ರತಿನಿಧಿಗಳು ಅಲ್ಲಿಗೆ ತೆರಳಿದ್ದಾರೆ.

ಈ ಸಂದರ್ಭದಲ್ಲಿ ಸಿಎಂ ಬೆಂಗಾವಲು ಪಡೆಯವರು ಕ್ಯಾಮೆರಾ ಮೆನ್ ಗಳಿಗೆ ವಿಡಿಯೋ ಮಾಡದಂತೆ ತಡೆಯನ್ನುಂಟು ಮಾಡಿದ್ದಾರೆ. ಜತೆಗೆ ಕ್ಯಾಮರಾಗಳನ್ನು ತಳ್ಳಿ ಗೂಂಡಾಗಿರಿ ನಡೆಸಿದ್ದಾರೆ ಎನ್ನಲಾಗುತ್ತಿದೆ. ಈ ಮೂಲಕ ಮಾಧ್ಯಮ ಪ್ರತಿನಿಧಿಗಳ ಕರ್ತವ್ಯಕ್ಕೆ ಸಿಎಂ ಬೆಂಗಾವಲು ಪಡೆಯವರು ಅಡ್ಡಿಪಡಿಸಿದ್ದಾರೆ.

NO COMMENTS

LEAVE A REPLY