ಸಾಧಕರ ಜೀವನ ಚರಿತ್ರೆಯೇ ಸಾಧನೆಗೆ ಸ್ಫೂರ್ತಿ : ಡಿ.ಭಾರತಿ

ಸಾಧಕರ ಜೀವನ ಚರಿತ್ರೆಯೇ ಸಾಧನೆಗೆ ಸ್ಫೂರ್ತಿ : ಡಿ.ಭಾರತಿ

299
0
SHARE

 

ಸಾಧಕರ ಜೀವನ ಚರಿತ್ರೆಯೇ ಸಾಧನೆಗೆ ಸ್ಫೂರ್ತಿ : ಡಿ.ಭಾರತಿ

ಪ್ರತಿಯೊಬ್ಬರೂ ಕನಿಷ್ಠ ಹತ್ತು ಸಾಧಕರ ಜೀವನ ಚರಿತ್ರೆಯನ್ನು ಓದಬೇಕು, ಇದರಿಂದ ಸಾಧನೆಗೆ ಸ್ಫೂರ್ತಿ ದೊರೆಯುತ್ತದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವರಾದ ಡಿ ಭಾರತಿಯವರು ಹೇಳಿದರು.
ಮೈಸೂರು ವಿವಿ ಮಾನಸ ಗಂಗೋತ್ರಿಯ ಸೆನೆಟ್ ಭವನದಲ್ಲಿ ಹಿಂದುಳಿದ ವರ್ಗಗಳ ಕೋಶ ಆಯೋಜಿಸಿದ್ದ ವೃತ್ತಿ ಕೌಶಲ್ಯ ಮತ್ತು ವ್ಯಕ್ತಿ ವಿಕಸನ ಕುರಿತ ಎರಡು ದಿನಗಳ ಕಾರ್ಯಾಗಾರ ಇಂದು ಸಮಾರೋಪ ಸಮಾರಂಭದೊಂದಿಗೆ ಯಶಸ್ವಿಯಾಗಿ ಮುಕ್ತಾಯಗೊಂಡಿತು
ಮುಖ್ಯ ಅತಿಥಿಗಳಾಗಿ ಆಗಮಿಸಿದ ಇವರು ಮಾತನಾಡಿ ಈ ಭೂಮಿಯಲ್ಲಿ ಸೃಷ್ಟಿ ಗೊಂಡಿರುವ ಪ್ರತಿಯೊಂದು ಜೀವಿಗಳಿಗೂ ಕೂಡ ತನ್ನದೇ ಆದ ಶಕ್ತಿ ಸಾಮರ್ಥ್ಯವಿದೆ ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು, ಬೇರೆಯವರಿಗೆ ಹೋಲಿಕೆ ಮಾಡಿಕೊಂಡು ಖಿನ್ನತೆಗೆ ಒಳಗಾಗುವುದನ್ನು ಬಿಡಬೇಕು . ವೃತ್ತಿ ಕೌಶಲ್ಯ, ಸಮಯಪಾಲನೆ , ಪರೀಕ್ಷಾ ತಯಾರಿಗಳ ಬಗ್ಗೆ ತಿಳಿಸಿಕೊಟ್ಟು ಈ ಕಾರ್ಯಕ್ರಮ ಒಂದು ಕಿಡಿಯನ್ನು ಹತ್ತಿಸುತ್ತದೆ ಇದನ್ನು ಬೆಳೆಸುವುದು ಹಾಗೂ ಬಳಸಿಕೊಳ್ಳುವುದು ನಿಮ್ಮ ಕರ್ತವ್ಯ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವರ ಪ್ರೊ. ಜೆ . ಸೋಮಶೇಖರ್ ಮಾತನಾಡಿ ನೂರು ವರ್ಷಗಳ ನಂತರ ಮೈಸೂರು ವಿವಿಯಲ್ಲಿ ಹಿಂದುಳಿದ ವರ್ಗಗಳ ಕೋಶ ಆರಂಭಗೊಂಡಿದೆ,
ಸಕಾರಾತ್ಮಕ ಹೆಜ್ಜೆಗಳನ್ನು ಕೊಡುವ ನಿರ್ಧಾರಗಳಿಗೆ ಆದ್ಯತೆ ನೀಡಬೇಕು , ಗಂಗೋತ್ರಿಯಲ್ಲಿ ಎರಡು ವರ್ಷ ವಿದ್ಯಾಭ್ಯಾಸ ಮುಗಿಸಿ ಹೊರಗೆ ಹೋಗುವಷ್ಟರಲ್ಲಿ ಎಲ್ಲಾ ಕೌಶಲ್ಯಗಳ ಪಡೆದಿರಬೇಕು, ಇಲ್ಲಿ ಕಲಿತದ್ದನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಈ ಕಾರ್ಯಕ್ರಮ ಸಫಲತೆ ಯಾಗುತ್ತದೆ ಎಂದು ತಿಳಿಸಿದರು.


ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ವಿಠಲಾಪುರದ ಜಯರಾಂ , ಸಂಯೋಜನಾಧಿಕಾರಿಗಳಾದ ಸುರೇಶ್ , ಡಾ. ಸದಾಶಿವ , ಮೈಸೂರು ವಿವಿ ಹಿಂದುಳಿದ ವರ್ಗದ ವಿದ್ಯಾರ್ಥಿ ಒಕ್ಕೂಟದ ಉಪಾಧ್ಯಕ್ಷರಾದ ರಾಕೇಶ್. ಸಿ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು .

ವರದಿ : ಚೈತ್ರ ಗೌಡ ಹಾಸನ್

NO COMMENTS

LEAVE A REPLY