ಮೀಸಲಾತಿ ಜಾತಿಗಲ್ಲ ವರ್ಗಕ್ಕೆ : ಪಿ ಶಿವಶಂಕರ್

ಮೀಸಲಾತಿ ಜಾತಿಗಲ್ಲ ವರ್ಗಕ್ಕೆ : ಪಿ ಶಿವಶಂಕರ್

266
0
SHARE

ಮೀಸಲಾತಿ ಜಾತಿಗಲ್ಲ ವರ್ಗಕ್ಕೆ : ಪಿ ಶಿವಶಂಕರ್

‘ಸಂವಿಧಾನದಲ್ಲಿ ಮೀಸಲಾತಿ ಇರುವುದು ಜಾತಿಗಳ ಆಧಾರದ ಮೇಲಲ್ಲ ವರ್ಗಗಳ ಆಧರಾದ ಮೇಲೆ’ ಎಂದು ಮೈಸೂರು ಜಿ ಪಂ ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಪಿ.ಶಿವಶಂಕರ್ ಹೇಳಿದರು .

ಮೈಸೂರು ವಿ ವಿ ಮಾನಸ ಗಂಗೋತ್ರಿಯ ಸೆನೆಟ್ ಭವನದಲ್ಲಿ ಹಿಂದುಳಿದ ವರ್ಗಗಳ ಕೋಶ ಆಯೋಜಿಸಿದ್ದ ಹಿಂದುಳಿದ ವರ್ಗಗಳ ಕೋಶ ಹಾಗೂ ವೃತ್ತಿ ಕೌಶಲ್ಯ ಮತ್ತು ವ್ಯಕ್ತಿ ವಿಕಸನ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಅವರು ಮಾತನಾಡಿ ಸಂವಿಧಾನ ಕೆಲವು ಮಾನದಂಡಗಳನ್ನು ಇಟ್ಟುಕೊಂಡು ಮೀಸಲಾತಿಗೆ ಒಳಪಡುವ ವರ್ಗಗಳನ್ನು ಗುರುತಿಸಿ ಸಂವಿಧಾನಾತ್ಮಕ ಯೋಜನೆಗಳನ್ನು ದೊರೆಯುವಂತೆ ಮಾಡಿದೆ ಎಂದು ಮೀಸಲಾತಿಯ ಅವಶ್ಯಕತೆಗಳ ಕುರಿತು ಮಾತನಾಡಿದರು.


ನಂತರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮೈಸೂರು ವಿಶ್ವವಿದ್ಯಾನಿಲಯದ ಪ್ರಭಾರ ಕುಲಪತಿಗಳಾದ ಪ್ರೊ.ಸಿ.ಬಸವರಾಜು ಕಾರ್ಯಕ್ರಮವನ್ನು ಕುರಿತು ಮಾತನಾಡಿ ಕರ್ನಾಟಕ ಸರ್ಕಾರವು ಹಿಂದುಳಿದ ವರ್ಗಗಳ ವಿಧ್ಯಾರ್ಥಿಗಳ ಏಳಿಗೆಗಾಗಿ ಹಾಗೂ ಮುಖ್ಯ ವಾಹಿನಿಗೆ ತರಲು 5 ಲಕ್ಷ ರೂ ಹಣವನ್ನು ಮೈಸೂರು ವಿಶ್ವವಿದ್ಯಾನಿಲಯಕ್ಕೆ ನೀಡಿದೆ.ಇದಕ್ಕಾಗಿ ಕರ್ನಾಟಕ ಸರ್ಕಾರಕ್ಕೆ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇನೆ. ಈ ಹಣವನ್ನು ಮುಂದಿನ ವರ್ಷ ಮಾರ್ಚ್ 31 ರೊಳಗೆ ವಿದ್ಯಾರ್ಥಿಗಳ‌ ಅಭಿವೃದ್ಧಿಗೆ ಮುಕ್ತವಾಗಿ ವೆಚ್ಚಮಾಡಲಾಗುವುದು ಎಂದು ತಿಳಿಸಿದರು. ಮೈ ವಿವಿ ಸಿಂಡಿಕೇಟ್ ಸದಸ್ಯರಾದ ಕುಮಾರ್, ಸಂಯೋಜನಾಧಿಕಾರಿಗಳಾದ ಸುರೇಶ್ , ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಜಯರಾಂ ಇನ್ನಿತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.                                  ವರದಿ : ಚೈತ್ರ ಗೌಡ ಹಾಸನ್

NO COMMENTS

LEAVE A REPLY