ಗಂಗೋತ್ರಿಯಲ್ಲಿ ನಟ ಪ್ರಕಾಶ್ ರೈ ಯುವಜನತೆ ಜೊತೆ ಶಾಂತಿ ಸಂವಾದ..

ಗಂಗೋತ್ರಿಯಲ್ಲಿ ನಟ ಪ್ರಕಾಶ್ ರೈ ಯುವಜನತೆ ಜೊತೆ ಶಾಂತಿ ಸಂವಾದ..

299
0
SHARE

ಮೈಸೂರು(ಫೆ.26.2018): ಮೈಸೂರು ವಿವಿ ಮಾನಸಗಂಗೋತ್ರಿಯ ರೌಂಡ್ ಕ್ಯಾಂಟೀನ್ ಬಳಿ, ನಟ ಪ್ರಕಾಶ್ ರೈ ಯುವಶಕ್ತಿಯೊಂದಿಗೆ ಸಮಾಜದ ಸೌಹಾರ್ದತೆಗಾಗಿ “ನಮ್ಮ ನಡಿಗೆ ಶಾಂತಿಯಡೆಗೆ” ಎಂಬ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಸಂವಾದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ನಟ ಪ್ರಕಾಶ್ ರೈ, ಯುವಜನತೆಯು ಸಮಾಜದಲ್ಲಿ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಇಲ್ಲವೇ ಎಂದು ಪ್ರಶ್ನಿಸಿದರು. ಪ್ರಸ್ತುತದಲ್ಲಿ ರಾಜಕಾರಣಿಗಳು ಜಾತಿ ಹಾಗೂ ಧರ್ಮದ ಹೆಸರಿನಿಂದ ದೇಶದ ಯುವಸಮಾಜವನ್ನು ಇಬ್ಬಣ ಮಾಡಿತ್ತಿದ್ದಾರೆ, ಇದರಿಂದ ನಾವು ಮೂರ್ಖರಾಗುವುದು ಬೇಡ ಎಂದು ಎಚ್ಚರ ನೀಡಿದರು.

ಪ್ರಜೆಗಳು ಯಾವತ್ತು ಮೌನವಾಗಿರಬಾರದು ಎಂಬ ಸಂದೇಶ ನೀಡುವುದರ ಜೊತೆಗೆ, ಯಾವುದೇ ಜಾತಿ, ಬೇಧ ಬಾವವಿಲ್ಲದೆ‌, ಎಲ್ಲರೂ ಒಂದೇ ಎಂದು ಬಾವಿಸೊಣ ಎಂಬ ಬಾವೈಕ್ಯತೆಯನ್ನು ಸಾರಿದರು.

ಸಮಾಜಿಕ ಜಾಲಾತಾಣಗಲ್ಲಿ ನಿಮ್ಮ ಅಭಿಪ್ರಾಯವನ್ನು ದೈರ್ಯವಾಗಿ ವ್ಯಕ್ತಪಡಿಸಿ. ನಮಗೆ ಜಗಳ, ಓಡೆದಾಟ ಬೇಡ, ಎಲ್ಲವನ್ನೂ ಮುಕ್ತ ಚರ್ಚೆ ಮುಖಾಂತರ ಬಗೆಹರಿಕೊಳ್ಳಣ ಎಂದು ನೆರೆದಿದ್ದ ವಿದ್ಯಾರ್ಥಿಗಳಿಗೆ ಸೂಚನೆ ನೀಡಿದರು.

ಸಮಾಜವನ್ನು ಕುರಿತು ವಿದ್ಯಾರ್ಥಿಗಳ ಹಲವಾರು ಪ್ರಶ್ನೆಗಳಿಗೆ ಪ್ರಕಾಶ್ ರೈ ಉತ್ತರ ನೀಡುವ ಮೂಲಕ ಅವರ ಗೊಂದಲವನ್ನು  ಸಹ ವಿವರವಾಗಿ ಬಗೆಹರಿಸಿದರು.

NO COMMENTS

LEAVE A REPLY