ಯದುವೀರ್‌ ಪುತ್ರನಿಗೆ ಆದ್ಯವೀರ ನರಸಿಂಹರಾಜ ಒಡೆಯರ್‌ ಎಂದು ನಾಮಕರಣ

ಯದುವೀರ್‌ ಪುತ್ರನಿಗೆ ಆದ್ಯವೀರ ನರಸಿಂಹರಾಜ ಒಡೆಯರ್‌ ಎಂದು ನಾಮಕರಣ

176
0
SHARE

ಬೆಂಗಳೂರು: ಮೈಸೂರು ಸಂಸ್ಥಾನದ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತ್ರಿಷಿಕಾ ದಂಪತಿಗೆ ಜನಿಸಿದ್ದ ಗಂಡು ಮಗುವಿನ ನಾಮಕರಣ ಭಾನುವಾರ ನೆರವೇರಿದೆ.

ಸರಳವಾಗಿ ಆಯೋಜಿಸಿದ್ದ ಮೈಸೂರು ರಾಜಮನೆತನದ ಉತ್ತರಾಧಿಕಾರಿಗೆ ಆದ್ಯವೀರ ನರಸಿಂಹರಾಜ ಒಡೆಯರ್ ಎಂದು ನಾಮಕರಣ ಮಾಡಲಾಗಿದೆ. ಕಾರ್ಯಕ್ರಮಕ್ಕೆ ತ್ರಿಷಿಕಾ ಪೋಷಕರು, ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಸಹೋದರಿಯರು ಸೇರಿದಂತೆ ಗಣ್ಯರು ಭಾಗಿಯಾಗಿದ್ದರು.

2015ರಲ್ಲಿ ರಾಜಮಾತೆ ಪ್ರಮೋದಾ ದೇವಿ ಯದುವೀರ್ ಅವರನ್ನು ದತ್ತು ಸ್ವೀಕರಿಸಿ ಮೈಸೂರು ಸಂಸ್ಥಾನದ ರಾಜವಂಶದ ಉತ್ತರಾಧಿಕಾರಿಯನ್ನಾಗಿಸಿದ್ದರು. 2016ರ ಜೂನ್‌ನಲ್ಲಿ ಯದುವೀರ್ ರಾಜಸ್ಥಾನ ರಾಜ ಕುಟುಂಬದ ತ್ರಿಷಿಕಾ ಕುಮಾರಿ ಅವರನ್ನು ವಿವಾಹವಾಗಿದ್ದರು. ಕಳೆದ ಡಿ.6ರಂದು ತ್ರಿಷಿಕಾ ಗಂಡು ಮಗುವಿಗೆ ಜನ್ಮ ನೀಡಿದ್ದರು.

NO COMMENTS

LEAVE A REPLY