ಖ್ಯಾತ ಬಾಲಿವುಡ್ ನಟಿ ಶ್ರೀದೇವಿ ನಿಧನ..!

ಖ್ಯಾತ ಬಾಲಿವುಡ್ ನಟಿ ಶ್ರೀದೇವಿ ನಿಧನ..!

573
0
SHARE

ದುಬೈ(ಫೆ.25.2018): ಮೋಹಕ ತಾರೆ,  ಬಾಲಿವುಡ್ ನಟಿ ಶ್ರಿದೇವಿ ಅಕಾಲಿಕ ಮರಣಕ್ಕೆ ತುತ್ತಾಗಿದ್ದು, ದೇಶದ ಚಿತ್ರರಂಗವೇ ದಿಗ್ಭ್ರಮೆಗೊಂಡಿದೆ.

ಬಾಲನಟಿಯಾಗಿ, 4ನೇ ವರ್ಷಕ್ಕೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ 54 ವರ್ಷದ ಈ ನಟಿ ದೂರದ ದುಬೈನಲ್ಲಿ ಇಹಲೋಕ ತ್ಯಜಿಸಿದ್ದಾರೆ.

ಬಾಲನಟಿಯಾಗಿ ಕನ್ನಡದ ‘ಭಕ್ತ ಕುಂಬಾರ’, ಬಾಲಭಾರತ ಸೇರಿ ತಮಿಳು, ತೆಲಗು ಚಿತ್ರಗಳಲ್ಲಿಯೂ ನಟಿಸಿದ್ದರು ಶ್ರೀದೇವಿ. ಡಾ.ರಾಜ್‌ಕುಮಾರ್, ರಜನೀಕಾಂತ್, ಕಮಲ್ ಹಾಸನ್, ಚಿರಂಜೀವಿ ಸೇರಿ ಹಲವು ಖ್ಯಾತ ನಟರೊಂದಿಗೆ ನಟಿಸಿದ್ದರು. ಅನಿಲ್‌ ಕಪೂರ್ ಮತ್ತು ಇವರ ಜೋಡಿ ಬಾಲಿವುಡ್‌ನಲ್ಲಿ ಉತ್ತಮ ಹೆಸರು ಮಾಡಿತ್ತು.

1963 ರ ಅಗಸ್ಟ್​ 13 ರಂದು ತಮಿಳುನಾಡಿನ ಶಿವಕಾಶಿಯಲ್ಲಿ ಜನಿಸಿದ ಶ್ರೀದೇವಿ, ಬಾಲನಟಿಯಾಗಿ ಚಿತ್ರರಂಗಕ್ಕೆ ಬಂದು, ಸೂಪರ್ ಸ್ಟಾರ್ ಆಗಿ ಬೆಳೆದವರು. ತೆಲುಗಿನಲ್ಲಿ 76, ಹಿಂದಿಯಲ್ಲಿ 71, ತಮಿಳಿನಲ್ಲಿ 76, ಮಲಯಾಳಂನಲ್ಲಿ 26 , ಕನ್ನಡದಲ್ಲಿ 6 ಚಿತ್ರಗಳು ಸೇರಿದಂತೆ ಸುಮಾರು 260ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದರು.

ಬಾಲಿವುಡ್ ಚಿತ್ರದಲ್ಲಿ ನಟಿಸಿದ ಮೋಹಕ ತಾರೆ, ದುಬೈನಲ್ಲಿ ವಿವಾಹ ಸಮಾರಂಭಕ್ಕೆ ತೆರಳಿದಾಗಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಸಂಗೀತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಫೋಟೋವನ್ನು ಶ್ರೀದೇವಿ ಶೇರ್ ಮಾಡಿಕೊಂಡಿದ್ದರು.

NO COMMENTS

LEAVE A REPLY