ಮೇಘಾಲಯ ಎನ್‌ಕೌಂಟರ್‌: ವಾಂಟೆಡ್‌ ಉಗ್ರನ ಹತ್ಯೆ

ಮೇಘಾಲಯ ಎನ್‌ಕೌಂಟರ್‌: ವಾಂಟೆಡ್‌ ಉಗ್ರನ ಹತ್ಯೆ

133
0
SHARE

ಗುವಾಹಟಿ: ಕುಖ್ಯಾತ ಉಗ್ರ ಸಂಘಟನೆ ಗರೋ ರಾಷ್ಟ್ರೀಯ ಲಿಬರೇಷನ್‌ ಆರ್ಮಿಯ ಉಗ್ರ ಸೋಹನ್‌ ಡಿ ಶಿರಾನನ್ನು ಮೇಘಾಲಯ ಪೊಲೀಸರು ಶನಿವಾರದಂದು ಹೊಡೆದುರುಳಿಸಿದ್ದಾರೆ.

ಕೆಲದಿನಗಿಳ ಹಿಂದೆ ವಿಲ್ಲಿಮಾನಗರ್‌ನ ಎನ್‌ಸಿಪಿ ನಾಯಕ ಜೋನಥನ್‌ ಎನ್‌ ಸಂಗ್ಮಾ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಮೇಘಾಲಯ ಪೊಲೀಸರಿಗೆ ಈ ಪ್ರಕರಣದಲ್ಲಿ ಸೋಹನ್‌ ಕೈವಾಡವಿರುದು ಪತ್ತೆಹಚ್ಚಿದ್ದಾರೆ.ಈತನ ವಿರುದ್ಧ ಶೋಧ ಕಾರ್ಯದಲ್ಲಿ ತೊಡಗಿದ್ದ ಪೊಲೀಸರು ಶನಿವಾರ ಮಧ್ಯಾಹ್ನ ಈತ ದೊಬು ಅಚಕ್ಪೋಕ್‌ನಲ್ಲಿರುವುದನ್ನು ಗುರುತಿಸಿದ್ದಾರೆ. ಮೊಲದಿಗೆ ಶರಣಾಗುವಂತೆ ಸೂಚಿಸಿದ್ದಾದರೂ ಈತನ ಗ್ಯಾಂಗ್‌ ನಡೆಸಿದ ದಾಳಿಯಿಂದ ಪೊಲೀಸರು ಪ್ರತಿ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಸೋಹನ್‌ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಗರೋ ಹಿಲ್ಸ್‌ ಪೊಲೀಸರು ತಿಳಿಸಿದ್ದಾರೆ.

ಮೇಘಾಲಯದ ಗರೋ ಹಿಲ್ಸ್‌ನಲ್ಲಿ ಸೋಹನ್‌ ಹಾಗೂ ಈತನ ಆರ್ಮಿ ಪ್ರತ್ಯೇಕ ಗರೋಲ್ಯಾಂಡ್‌ ರಾಜ್ಯದ ಮನವಿಯನ್ನು ಇಟ್ಟಿದ್ದರು. ಇದು ಬಾಂಗ್ಲಾದೇಶ ಹಾಗೂ ಅಸ್ಸಾಂ ಗಡಿಭಾಗದಲ್ಲಿದೆ.

NO COMMENTS

LEAVE A REPLY