ಆಫ್ಘನ್‌ ಸೇನಾ ನೆಲೆ ಮೇಲೆ ತಾಲಿಬಾನ್ ಉಗ್ರ ದಾಳಿ: ಕನಿಷ್ಠ 23 ಬಲಿ

ಆಫ್ಘನ್‌ ಸೇನಾ ನೆಲೆ ಮೇಲೆ ತಾಲಿಬಾನ್ ಉಗ್ರ ದಾಳಿ: ಕನಿಷ್ಠ 23 ಬಲಿ

197
0
SHARE

ಕಾಬೂಲ್‌: ಅಫ್ಘಾನಿಸ್ತಾನದಲ್ಲಿ ಶನಿವಾರ ನಡೆದ ಸರಣಿ ಅತ್ಮಹತ್ಯಾ ಬಾಂಬ್ ಸ್ಫೋಟಗಳಲ್ಲಿ ಕನಿಷ್ಠ 23 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಪಶ್ಚಿಮದ ಫರಾ ಪ್ರಾಂತ್ಯದ ಸೇನಾ ನೆಲೆಯ ಮೇಲೆ ಮಧ್ಯರಾತ್ರಿ ತಾಲಿಬಾನ್ ಉಗ್ರರು ದಾಳಿ ನಡೆಸಿ 18 ಸೈನಿಕರನ್ನು ಹತ್ಯೆ ಮಾಡಿದ್ದಾರೆ.ಫರಾ ಪ್ರಾಂತ್ಯದ ಬಲಾ ಬುಲುಕ್ ಜಿಲ್ಲೆಯ ಸೇನಾ ನೆಲೆಯ ಮೇಲೆ ಕಳೆದ ರಾತ್ರಿ ಉಗ್ರರ ಗುಂಪೊಂದು ದಾಳಿ ನಡೆಸಿದೆ. ದುರದೃಷ್ಟವಶಾತ್ ನಾವು 18 ಯೋಧರನ್ನು ಕಳೆದುಕೊಂಡಿದ್ದೇವೆ. ಇಬ್ಬರು ಸೈನಿಕರು ಗಾಯಗೊಂಡಿದ್ದಾರೆ. ಕೂಡಲೇ ಸ್ಥಳಕ್ಕೆ ಹೆಚ್ಚುವರಿ ಯೋಧರನ್ನು ರವಾನಿಸಲಾಗಿದೆ’ ಎಂದು ರಕ್ಷಣಾ ವಕ್ತಾರ ದೌಲತ್ ವಜೀರ್ ತಿಳಿಸಿದರು.

ದಾಳಿಯ ಹೊಣೆಯನ್ನು ತಾಲಿಬಾನ್ ಉಗ್ರ ಸಂಘಟನೆ ಹೊತ್ತುಕೊಂಡಿದೆ.

ಕಾಬೂಲ್‌ನ ದೂತಾವಾಸಗಳ ಪ್ರದೇಶದಲ್ಲಿ ಶನಿವಾರ ಬೆಳಗ್ಗೆ 8:30ರ ಸುಮಾರಿಗೆ ಮತ್ತೊಬ್ಬ ಆತ್ಮಹತ್ಯಾ ಬಾಂಬರ್ ಸ್ಫೋಟಿಸಿ ಕನಿಷ್ಠ ಮೂವರನ್ನು ಹತ್ಯೆ ಮಾಡಿದ್ದಾನೆ. ಇತರ ಐವರು ಗಾಯಗೊಂಡಿದ್ದಾರೆ ಎಂದು ಗೃಹ ಸಚಿವಾಲಯದ ವಕ್ತಾರ ನಸ್ರತ್ ರಹಿಮಿ ಸುದ್ದಿಸಂಸ್ಥೆಗೆ ತಿಳಿಸಿದರು.

NO COMMENTS

LEAVE A REPLY