ಮೈಸೂರು ಪಾಲಿಕೆ ಮೇಯರ್ ಭಾಗ್ಯವತಿ ವಿರುದ್ದ ಶಿಸ್ತು ಕ್ರಮಕ್ಕೆ ಸೂಚನೆ..!

ಮೈಸೂರು ಪಾಲಿಕೆ ಮೇಯರ್ ಭಾಗ್ಯವತಿ ವಿರುದ್ದ ಶಿಸ್ತು ಕ್ರಮಕ್ಕೆ ಸೂಚನೆ..!

240
0
SHARE

ಮೈಸೂರು(ಫೆ.23.2018):ಜೆಡಿಎಸ್- ಬಿಜೆಪಿ ಮೈತ್ರಿ ಬೆಂಬಲ ಪಡೆದು ಮೇಯರ್ ಆಗಿರುವ ಭಾಗ್ಯವತಿ ವಿರುದ್ದ ಶಿಸ್ತು ಕ್ರಮ ಕೈಗೊಳ್ಳುವಂತೆ ಕೆಪಿಸಿಸಿ ಸೂಚನೆ ನೀಡಿದೆ.

ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ ವೇಳೆ ಜೆ ಡಿ ಎಸ್-ಬಿಜೆಪಿ ಬೆಂಬಲ ಪಡದು ಮೇಯರ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ ಚಾಮರಾಜ ವಿಧಾನಸಭಾ ಕ್ಷೇತ್ರದ 23 ನೇ ವಾರ್ಡಿನ ಕಾಂಗ್ರೆಸ್ ಪಾಲಿಕೆ ಸದಸ್ಯೆ ಭಾಗ್ಯವತಿ ಮೇಯರ್ ಆಗಿದ್ದರು.

ಹೀಗಾಗಿ ಭಾಗ್ಯವತಿ ಪಕ್ಷವಿರೋಧಿ ಚಟುವಟಿಕೆ ಭಾಗಿಯಾದ ಹಿನ್ನೆಲೆ ಜಿಲ್ಲಾ ಕಾಂಗ್ರೆಸ್ ಶಿಸ್ತು ಕ್ರಮಕ್ಕೆ ಮುಂದಾಗಿದ್ದು, ಭಾಗ್ಯವತಿ ಅವರನ್ನ ಪಕ್ಷದಿಂದ ಉಚ್ಚಾಟನೆ ಮಾಡಲು ನಿರ್ಧರಿಸಿದೆ. ಈ ಸಂಬಂಧ ಮೇಯರ್ ಭಾಗ್ಯವತಿ ವಿರುದ್ದ ಜಿಲ್ಲಾ ಕಾಂಗ್ರೆಸ್ ಕಾನೂನು ಹೋರಾಟಕ್ಕೆ ಮುಂದಾಗಿದೆ.

ಸಿ ಎಂ ಮೈಸೂರಿನಲ್ಲಿ ಇರುವ ದಿನದಂದೆ ಮೈಸೂರು ನಗರ ಪಾಲಿಕೆ ಮೇಯರ್ ಉಪ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಅಂದು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಜೆ ಡಿ ಎಸ್ ಬೆಂಬಲ ಪಡೆದು ಭಾಗ್ಯವತಿ ಮೇಯರ್ ಆಗಿದ್ದರು. ಪರಿಶಿಷ್ಟ ಜಾತಿಗೆ ಮೇಯರ್ ಸ್ಥಾನ ಮೀಸಲಾಗಿತ್ತು. ಆದರೆ ಜೆ ಡಿ ಎಸ್ ಹಾಗೂ ಬಿಜೆಪಿ ಬಳಿ ಪರಿಶಿಷ್ಟ ಜಾತಿ ಮಹಿಳಾ ಸದಸ್ಯೆಯರೇ ಇರಲಿಲ್ಲ.

ಆದ್ರು ಕೈ ಪಾರ್ಟಿ ತೊರೆದು ಮೇಯರ್ ಆದ ಭಾಗ್ಯವತಿ ಅವರ ವಿರುದ್ದ ಶಿಸ್ತು ಕ್ರಮದ ತೂಗುತ್ತಿದೆ. ಒಂದು ವೇಳೆ ಪಕ್ಷದ ಶಿಸ್ತು ಕ್ರಮದಂತೆ ಮೇಯರ್ ಸ್ಥಾನ ಕಳೆದು ಕೊಂಡ್ರೆ ಮೈಸೂರು ಮಹಾನಗರ ಪಾಲಿಕೆಯಲ್ಲಿ ಇತಿಹಾಸ ನಿರ್ಮಾಣವಾಗಲಿದೆ.

NO COMMENTS

LEAVE A REPLY