ಪಿಯುಸಿ ಅರ್ಹತೆ ಮೇರೆಗೆ ಏರ್ ಇಂಡಿಯಾದಲ್ಲಿ ಉದ್ಯೋಗವಕಾಶ..

ಪಿಯುಸಿ ಅರ್ಹತೆ ಮೇರೆಗೆ ಏರ್ ಇಂಡಿಯಾದಲ್ಲಿ ಉದ್ಯೋಗವಕಾಶ..

275
0
SHARE

ಮೈಸೂರು (ಫೆ.23.2018): ಪಿಯುಸಿ ಪಾಸ್ ಆದ ನಿರುದ್ಯೋಗಿಗಳಿಗೊಂದು ಖುಷಿ ಸುದ್ದಿಯಿದೆ. ಏರ್ ಇಂಡಿಯಾದಲ್ಲಿ ಕೆಲಸ ಮಾಡುವ ಅವಕಾಶ ಸಿಗ್ತಿದೆ. 500ಕ್ಕೂ ಹೆಚ್ಚು ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ.

ಏರ್ ಇಂಡಿಯಾ ಅಧಿಕೃತ ವೆಬ್ಸೈಟ್ www.airindia.inನಲ್ಲಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಕ್ಯಾಬಿನ್ ಸಿಬ್ಬಂದಿ ಹುದ್ದೆಗೆ ಏರ್ ಇಂಡಿಯಾ ಅರ್ಜಿ ಕರೆದಿದೆ. ಅರ್ಜಿ ಸಲ್ಲಿಸಲು ಮಾರ್ಚ್ 12 ಕೊನೆಯ ದಿನವಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ 15 ಸಾವಿರ ರೂಪಾಯಿ ಸಂಬಳ ಸಿಗಲಿದೆ.

ಅರ್ಹತೆ : ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ 12ನೇ ತರಗತಿ ಪಾಸ್ ಆಗಿರಬೇಕು.

ಆಯ್ಕೆ ಪ್ರಕ್ರಿಯೆ :ಅಭ್ಯರ್ಥಿಗಳ ಆಯ್ಕೆ ಸ್ಕ್ರೀನಿಂಗ್ / ಸಂದರ್ಶನದ ಮೂಲಕ ನಡೆಯಲಿದೆ.

ವಯಸ್ಸಿನ ಮಿತಿ : ಈ ಹುದ್ದೆಗೆ 18 ವರ್ಷದಿಂದ 35 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಿನಾಯಿತಿ ನೀಡಲಾಗಿದೆ.

ಶುಲ್ಕ : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 100 ರೂಪಾಯಿ ಶುಲ್ಕ ನೀಡಬೇಕು.

NO COMMENTS

LEAVE A REPLY