ಬಿಜೆಪಿಯದ್ದು 90% ಸರ್ಕಾರ: ಸಿಎಂ ಸಿದ್ದರಾಮಯ್ಯ ತಿರುಗೇಟು..

ಬಿಜೆಪಿಯದ್ದು 90% ಸರ್ಕಾರ: ಸಿಎಂ ಸಿದ್ದರಾಮಯ್ಯ ತಿರುಗೇಟು..

253
0
SHARE

ಬೆಂಗಳೂರು(ಫೆ.23.2018) : ನಮ್ಮ ಸರ್ಕಾರವನ್ನು 10 ಪರ್ಸೆಂಟ್‌ ಸರ್ಕಾರ ಎಂದು ಯಾವುದೇ ಆಧಾರವಿಲ್ಲದೆ ಆರೋಪ ಮಾಡಿದ್ದೀರಿ. ಆದರೆ, ನಿಮ್ಮ ಹಿಂದಿನ ಸರ್ಕಾರ 90 ಪರ್ಸೆಂಟ್‌ ಸರ್ಕಾರವಾಗಿತ್ತು. ಮುಖ್ಯಮಂತ್ರಿಯಾಗಿದ್ದವರು ಸೇರಿದಂತೆ ಹಲವು ಸಚಿವರು, ಶಾಸಕರು ಜೈಲು ಸೇರಿದ್ದೇ ಇದಕ್ಕೆ ಸಾಕ್ಷ್ಯ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಆಪಾದಿಸಿದ್ದಾರೆ.

‘ಕೇಂದ್ರ ಸರ್ಕಾರವೇನು ಆಕಾಶದಲ್ಲಿ ತೆರಿಗೆ ವಸೂಲು ಮಾಡುತ್ತದೆಯೇ? ರಾಜ್ಯಗಳಿಂದಲೇ ತೆರಿಗೆ ಸಂಗ್ರಹಿಸಬೇಕು. ಅದು ನಮ್ಮ ಹಕ್ಕು. ಅದರಲ್ಲಿ ನಮ್ಮ ಪಾಲಿದೆ. ಆದರೂ ಕೆಲ ವರು ಆಕಾಶದಿಂದ ಕೊಟ್ಟವರಂತೆ, ತಮ್ಮ ಕೈಯಿಂದ ಕೊಟ್ಟವರಂತೆ ಮಾತನಾಡುತ್ತಾರೆ’ ಎಂದೂ ಅವರು ಹರಿಹಾಯ್ದಿದ್ದಾರೆ.

ಗುರುವಾರ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಉತ್ತರ ನೀಡಿದ ಅವರು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ಆರೋಪಗಳಿಗೆ ಅವರ ಹೆಸರನ್ನು ಪ್ರಸ್ತಾಪಿಸದೆ ತಿರುಗೇಟು ನೀಡುವ ಪ್ರಯತ್ನ ಮಾಡಿದರು.

NO COMMENTS

LEAVE A REPLY