ಪಂಚಭೂತಗಳಲ್ಲಿ ವಿಲೀನವಾದ ಕೆ.ಎಸ್ ಪುಟ್ಟಣ್ಣಯ್ಯ..

ಪಂಚಭೂತಗಳಲ್ಲಿ ವಿಲೀನವಾದ ಕೆ.ಎಸ್ ಪುಟ್ಟಣ್ಣಯ್ಯ..

265
0
SHARE

ಮಂಡ್ಯ(ಫೆ.22.2018) : ಸಾವಿರಾರು ರೈತರು ಹಸಿರು ಶಾಲನ್ನು ತಿರುಗಿಸುವ ಮೂಲಕ ರೈತ ನಾಯಕ ಮತ್ತು ಮೇಲುಕೋಟೆ ಕ್ಷೇತ್ರದ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಅವರಿಗೆ ಅಂತಿಮ ನಮನ ಸಲ್ಲಿಸಿದರು.

ಯಾವುದೇ ಧಾರ್ಮಿಕ ವಿಧಿವಿಧಾನಗಳು ಇಲ್ಲದೇ ಕೆ.ಎಸ್.ಪುಟ್ಟಣ್ಣಯ್ಯ ಅವರ ಅಂತ್ಯಕ್ರಿಯೆಯನ್ನು
ಸಕಲ ಸರ್ಕಾರಿ ಗೌರವದೊಂದಿಗೆ ನಡೆಸಲಾಯಿತು. ಸಾವಿರಾರು ಜನರು ಅಗಲಿದ ರೈತ ನಾಯಕನಿಗೆ ಅಂತಿಮ ನಮನ ಸಲ್ಲಿಸಿದರು.

ಗುರುವಾರ ಮಂಡ್ಯ ಜಿಲ್ಲೆಯ ಪಾಂಡವಪುರದ ಜಮೀನಿನಲ್ಲಿ ಕೆ.ಎಸ್.ಪುಟ್ಟಣ್ಣಯ್ಯ ಅವರ ಅಂತ್ಯಕ್ರಿಯೆ ನಡೆಯಿತ್ತು. ಸಾವಿರಾರು ಜನರು ಅಗಲಿದ ರೈತ ಮುಖಂಡನಿಗೆ ಅಂತಿಮ ನಮನ ಸಲ್ಲಿಸಿದರು.

ಅಗಲಿದ ರೈತ ನಾಯಕನಿಗೆ ಗಣ್ಯರ ಅಶ್ರುತರ್ಪಣ

ವಿದೇಶದಿಂದ ಆಗಮಿಸಿದ್ದ ಪುಟ್ಟಣ್ಣಯ್ಯ ಅವರ ಪುತ್ರಿ ಮತ್ತು ಮೊಮ್ಮಗಳು ದರ್ಶನ ಪಡೆದರು. ಬಳಿಕ ಕ್ಯಾತಮಾರನಹಳ್ಳಿಯ ಸರ್ಕಾರಿ ಪ್ರೌಢ ಶಾಲೆಯ ಮೈದಾನದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಂಡ್ಯ ಸಂಸದ ಸಿ.ಎಸ್.ಪುಟ್ಟರಾಜು, ಸಚಿವ ರಮೇಶ್ ಕುಮಾರ್, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎ.ಕೃಷ್ಣಪ್ಪ, ಸಾಲು ಮರದ ತಿಮ್ಮಕ್ಕ ಸೇರಿದಂತೆ ಹಲವಾರು ಗಣ್ಯರು ಅಂತಿಮ ದರ್ಶನ ಪಡೆದರು.

 ಯಾವುದೇ ವಿಧಿವಿಧಾನಗಳಿಲ್ಲ :

ಯಾವುದೇ ಧಾರ್ಮಿಕ ವಿಧಿ ವಿಧಾನಗಳಿಲ್ಲದೇ ಪುಟ್ಟಣ್ಣಯ್ಯ ಅವರ ಅಂತ್ಯ ಸಂಸ್ಕಾರವನ್ನು ನಡೆಸಲಾಯಿತು. ವಿವಿಧ ಧಾರ್ಮಿಕ ಗುರುಗಳು ಪಾರ್ಥಿವ ಶರೀರದ ಮುಂದೆ ಪ್ರಾರ್ಥನೆ ಸಲ್ಲಿಸಿದರು.

ಮೂರು ಸುತ್ತು ಕುಶಾಲ ತೋಪುಗಳನ್ನು ಹಾರಿಸುವ ಮೂಲಕ ಸಕಲ ಸರ್ಕಾರಿ ಗೌರವ ಸಲ್ಲಿಸಲಾಯಿತು. ವಿವಿಧ ಜಿಲ್ಲೆಗಳಿಂದ ಆಗಮಿಸಿದ ರೈತರು ಒಂದು ಹಿಡಿ ಮಣ್ಣನ್ನು ಹಾಕಿದರು.

NO COMMENTS

LEAVE A REPLY