ಮಾರಿಮುತ್ತು ಮೊಮ್ಮಗಳು ಸ್ಯಾಂಡಲ್‌ವುಡ್‌ಗೆ ಎಂಟ್ರಿ

ಮಾರಿಮುತ್ತು ಮೊಮ್ಮಗಳು ಸ್ಯಾಂಡಲ್‌ವುಡ್‌ಗೆ ಎಂಟ್ರಿ

220
0
SHARE

 

ಈಗ ಕನ್ನಡ ಚಿತ್ರರಂಗದ ಪೋಷಕ ನಟಿ, ಉಪೇಂದ್ರ ಸಿನಿಮಾದ ಮಾರಿಮುತ್ತು ಖ್ಯಾತಿಯ ಸರೋಜಮ್ಮ ಅವರ ಮೊಮ್ಮಗಳು ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಪುಟ್ಟರಾಜು ಲವರ್‌ ಆಫ್‌ ಶಶಿಕಾ ಎಂಬ ಸಿನಿಮಾದಲ್ಲಿ ಸರೋಜಮ್ಮ ಅವರ ಮೊಮ್ಮಗಳಾದ ಜಯಶ್ರೀ ಆರಾಧ್ಯ ನಟಿಸುತ್ತಿದ್ದಾರೆ. ಉಪೇಂದ್ರ ಸಿನಿಮಾದ ಮಾರಿಮುತ್ತು ಪಾತ್ರವನ್ನು ಯಾರು ಮರೆಯುವುದಕ್ಕೆ ಆಗಲ್ಲ. ಈ ಪಾತ್ರ ನಿರ್ವಹಿಸಿದ ಸರೋಜಮ್ಮ ಅವರನ್ನು ಜನ ಹಾಗೆ ಗುರುತಿಸಲು ಆರಂಭಿಸಿದ್ದರು. ಸರೋಜಮ್ಮ ಅವರಿಗೆ ತಮ್ಮ ಫ್ಯಾಮಿಲಿಯಲ್ಲಿ ಯಾರಾದ್ರೂ ಸಿನಿಮಾ ರಂಗಕ್ಕೆ ಬರಬೇಕು ಎಂಬ ಕನಸಿತ್ತಂತೆ ಈಗ ಅದನ್ನು ಮೊಮ್ಮಗಳು ಜಯಶ್ರೀ ಪೂರೈಸಿದ್ದಾರೆ.

ಕ್ಯೂಟ್‌ ಆಗಿರುವ ಜಯಶ್ರೀ ಆರಾಧ್ಯ ಈಗಾಗಲೇ ಅನೇಕ ಫೋಟೋ ಶೂಟ್‌ ಮಾಡಿಸಿದ್ದು, ಹೋಮ್ಲಿ ಮತ್ತು ಗ್ಲಾಮರ್‌ ಎರಡು ಪಾತ್ರಕ್ಕೆ ಹೊಂದಿಕೆಯಾಗುವಂತಹ ಲುಕ್‌ ಜಯಶ್ರೀಗಿದೆ.

ಪುಟ್ಟರಾಜು ಲವರ್‌ ಆಫ್‌ ಶಶಿಕಲಾ ಸಿನಿಮಾ ತುಮಕೂರಿನಲ್ಲಿ ನಡೆದ ಸತ್ಯ ಘಟನೆಯನ್ನು ಆಧರಿಸಿದೆ. ಈ ಚಿತ್ರದಲ್ಲಿ ಖೋ ಖೋ ಆಟದ ಕಥೆ ಸಹ ಇದ್ದು,ಇಬ್ಬರು ನಾಯಕಿಯರಿದ್ದು, ಅದರಲ್ಲಿ ಜಯಶ್ರೀ ಸಹ ಒಬ್ಬರು. ಇತ್ತಿಚಿಗೆ ಬಂದ ಹಾಡು ಇತ್ತಿಚಿಗಷ್ಟೆ ಪ್ರೆಮಿಗಳ ದಿನದ ವಿಶೇಷವಾಗಿ ಮಾಜಿ ಡವ್‌.. ಎಂಬ ಒಂದು ಆಲ್ಬಂ ಹಾಡು ರಿಲೀಸ್‌ ಆಗಿತ್ತು. ಈ ಹಾಡಿನಲ್ಲಿ ಜಯಶ್ರೀ ಆರಾಧ್ಯ ನಟಿಸಿದ್ದರು.

NO COMMENTS

LEAVE A REPLY