ಪರೇಶ್‌ ಮೇಸ್ತಾ ಮನೆಗೆ ಅಮಿತ್‌ ಶಾ ಭೇಟಿ: ಪಾಲಕರಿಗೆ ಸಾಂತ್ವನ ಹೇಳಿದ ಬಿಜೆಪಿ ರಾಷ್ಟ್ರಾಧ್ಯಕ್ಷ

ಪರೇಶ್‌ ಮೇಸ್ತಾ ಮನೆಗೆ ಅಮಿತ್‌ ಶಾ ಭೇಟಿ: ಪಾಲಕರಿಗೆ ಸಾಂತ್ವನ ಹೇಳಿದ ಬಿಜೆಪಿ ರಾಷ್ಟ್ರಾಧ್ಯಕ್ಷ

128
0
SHARE

ಹೊನ್ನಾವರ: ಇತ್ತೀಚೆಗೆ ಹತ್ಯೆಗೀಡಾ ಪರೇಶ್ ಮೇಸ್ತಾ ಮನೆಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾಭೇಟಿ ನೀಡಿ ಪಾಲಕರಿಗೆ ಸಾಂತ್ವನ ಹೇಳಿದರು. 

ಅಮಿತ್‌ ಶಾ ಅವರೊಂದಿಗೆ ಕೇಂದ್ರ ಸಚಿವ ಅನಂತ ಹೆಗಡೆ ಮಾಜಿ‌ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಇತತರು ಇದ್ದರು.ಅಮಿತ್‌ ಶಾ ಅವರು ಜ್ವರದಿಂದ ಬಳಲುತ್ತಿದ್ದರೂ ಪರೇಶ್‌ ಮೇಸ್ತಾ ಮನೆಗೆ ಭೇಟಿ ನೀಡಿದರು. 


ಅನಾರೋಗ್ಯದ ಕಾರಣದಿಂದಾಗಿ ಅಮಿತ್‌ ಶಾ ಅವರ ಕುಮಟಾ ಮತ್ತು ಗೋಕರ್ಣ ಕಾರ್ಯಕ್ರಮ ರದ್ದಾಗಿದೆ.
ಅಮಿತ್‌ ಶಾ ಅವರು ಪರೇಶ್‌ ಮೇಸ್ತಾ ಮನೆಯಿಂದ ನೇರವಾಗಿ ಹುಬ್ಬಳ್ಳಿಗೆ ತೆರಳಿದರು.ಅಮಿತ್‌ ಶಾ ಆಗಮನಕ್ಕೂ ಮುನ್ನ ಪರೇಶ್‌ ಮೇಸ್ತಾ ತಂದೆ ಕಮಲಾಕರ ಮೇಸ್ತಾ ವಿಜಯ ಕರ್ನಾಟಕ ಜತೆ ಮಾತನಾಡಿದರು.
ಪರೇಶ್ ಮೇಸ್ತಾ ಹತ್ಯೆ ತನಿಖೆಯನ್ನು ಎನ್ ಐ ಎಗೆ ವಹಿಸುವಂತೆ ಅಮಿತ್ ಶಾ ಅವರನ್ನು ಒತ್ತಾಯಿಸುತ್ತೇನೆ ಎಂದರು.
ಪರೇಶನ ದುಡಿಮೆಯಿಂದ ಕುಟುಂಬ ನಡೆಯುತ್ತಿತ್ತು. ಆದರೆ ಈಗ ಅವನಿಲ್ಲದ ಮೇಲೆ ಕುಟುಂಬಕ್ಕೆ ತೊಂದರೆಯಾಗಿದೆ. ಈ ಹಿನ್ನೆಲೆಯಲ್ಲಿ ನನ್ನ ಇನ್ನಿಬ್ಬರು ಮಕ್ಕಳಿಗೆ ಸರಕಾರಿ ನೌಕರಿ ನೀಡಬೇಕು ಎಂದು ಅಮಿತ್‌ ಶಾ ಅವರನ್ನು ಮನವಿ ಮಾಡುತ್ತೇನೆ ಎಂದೂ ಕಮಲಾಕರ ಮೇಸ್ತಾ ತಿಳಿಸಿದರು. 

NO COMMENTS

LEAVE A REPLY