ಶಿಕ್ಷಕಿಯನ್ನೇ ಕ್ಯಾಂಡಲ್‌ ನೈಟ್‌ ಡಿನ್ನರ್‌ಗೆ ಕರೆದ 8ರ ವಿದ್ಯಾರ್ಥಿ

ಶಿಕ್ಷಕಿಯನ್ನೇ ಕ್ಯಾಂಡಲ್‌ ನೈಟ್‌ ಡಿನ್ನರ್‌ಗೆ ಕರೆದ 8ರ ವಿದ್ಯಾರ್ಥಿ

153
0
SHARE

ಗುರುಗ್ರಾಮ: ವಿಚಿತ್ರ ಬೆಳವಣಿಗೆಯೊಂದರಲ್ಲಿ, ಇಲ್ಲಿನ ಶಾಲಾ ಬಾಲಕನೊಬ್ಬ ಶಾಲಾ ಶಿಕ್ಷಕಿ ಹಾಗೂ ಅವರ ಮಗಳನ್ನು ಅತ್ಯಾಚಾರ ಮಾಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಹಾಕಿದ್ದಾನೆ, ಮತ್ತೊಂದು ಪ್ರಕರಣದಲ್ಲಿ ಅದೇ ಶಾಲೆಯ ಎಂಟನೇ ತರಗತಿ ಮತ್ತೋರ್ವ ವಿದ್ಯಾರ್ಥಿ, ಶಾಲಾ ಶಿಕ್ಷಕಿಯನ್ನು ಕ್ಯಾಂಡಲ್‌ ಲೈಟ್‌ ಡಿನ್ನರ್‌ಗೆ ಆಹ್ವಾನಿಸಿ ಬಳಿಕ ಲೈಂಗಿಕ ಸಂಪರ್ಕ ನಡೆಸೋಣ ಎಂದು ಇ-ಮೇಲ್‌ ಸಂದೇಶ ರವಾನಿಸಿದ್ದಾನೆ

ಅಧಿಕೃತ ಮಾಹಿತಿಗಳ ಪ್ರಕಾರ ಎರಡೂ ಪ್ರಕರಣಗಳು ಕಳೆದ ಒಂದು ವಾರದ ಹಿಂದೆ ನಡೆದಿದ್ದು, ಇಬ್ಬರೂ ಬಾಲಕರು ಸಾಮಾಜಿಕ ಜಾಲತಾಣದಲ್ಲಿ ಬರುವ ಪ್ರಾಂಕ್‌ ವೀಡಿಯೋ ನೋಡಿ ಅದರಿಂದ ಪ್ರೇರೇಪಿತರಾಗಿ ಈ ರೀತಿ ಮಾಡಿದ್ದಾರೆ ಎಂದು ಶಾಲಾ ಶಿಕ್ಷಕರ ಮೂಲಗಳು ತಿಳಿಸಿವೆ. ಅಲ್ಲದೇ ಇಬ್ಬರೂ ವಿದ್ಯಾರ್ಥಿಗಳನ್ನು ಈಗಾಗಲೇ ಶಾಲೆಯಿಂದ ಅಮಾನತುಗೊಳಿಸಲಾಗಿದೆ. ಆದರೆ ಈ ಪ್ರಕರಣವನ್ನು ಮಕ್ಕಳ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ಶಕುಂತಲಾ ಧಲ್‌ ಗಂಭೀರವಾಗಿ ಪರಿಗಣಿಸಿದ್ದು, ಸ್ವಯಂ ಪ್ರೇರಿತ ದೂರು ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಎಲ್ಲರಿಗೂ ನೋಟೀಸ್‌ ಜಾರಿ ಮಾಡಿದ್ದು, ಸಂಪೂರ್ಣ ಮಾಹಿತಿ ಕಲೆಹಾಕಲಾಗುತ್ತದೆ, ಇದರೊಂದಿಗೆ ಶಿಕ್ಷಕರೂ ಸೇರಿದಂತೆ ಮಕ್ಕಳಿಗೆ ಕೌನ್ಸೆಲಿಂಗ್‌ ಕೂಡಾ ಮಾಡಿಸಲಾಗುತ್ತದೆ ಎಂದು ಶಕುಂತಲಾ ಧಲ್‌ ಹೇಳಿದ್ದಾರೆ.

ಘಟನೆ ಕುರಿತು ಹಲವಾರು ಅಧ್ಯಾಪರು ಅಭಿಪ್ರಾಯ ಹಂಚಿಕೊಂಡಿದ್ದು, ಇಂತಹ ಪ್ರಕರಣದಲ್ಲಿ ಮಕ್ಕಳ ಸಾಮಾಜಿಕ ಜಾಲತಾಣದ ಬಳಕೆ ಕುರಿತು ಪೋಷಕರು ಹೆಚ್ಚು ಗಮನ ನೀಡಬೇಕು, ಅದರಲ್ಲಿ ವೀಕ್ಷಿಸುವ ವೀಡಿಯೋ ಕುರಿತು ಎಲ್ಲರೂ ಗಮನ ಕೊಡಬೇಕು ಎಂದು ಹೇಳಿದ್ದಾರೆ.

NO COMMENTS

LEAVE A REPLY