ಕಣ್ಸನ್ನೆ ಹುಡುಗಿ ಪ್ರಿಯಾ ಕನ್ನಡ ಚಿತ್ರರಂಗಕ್ಕೆ ಎಂಟ್ರಿ..

ಕಣ್ಸನ್ನೆ ಹುಡುಗಿ ಪ್ರಿಯಾ ಕನ್ನಡ ಚಿತ್ರರಂಗಕ್ಕೆ ಎಂಟ್ರಿ..

208
0
SHARE

ಬೆಂಗಳೂರು(ಫೆ.21.2018):ಕಣ್ಸನ್ನೆ ವಿಡಿಯೊ ಮೂಲಕ ಹುಡುಗರ ಮನಸೂರೆಗೊಂಡ ಮಲಯಾಳಂ ಬೆಡಗಿ ಪ್ರಿಯಾ ಪ್ರಕಾಶ್ ವಾರಿಯರ್ ಸ್ಯಾಂಡಲ್ ವುಡ್ ಚಿತ್ರದಲ್ಲಿ ಅಭಿನಯಿಸಲಿದ್ದಾರೆ.

‘ಒರು ಆಡಾರ್ ಲವ್’ ಚಿತ್ರದ ವಿಡಿಯೊದಲ್ಲಿ ಕಣ್ಸನ್ನೆ ಮಾಡಿ, ಬುಲೆಟ್ ಹಾರಿಸಿದ ಪ್ರಿಯಾ ನ್ಯಾಷನಲ್ ಸ್ಟಾರ್ ಆಗಿದ್ದು, ಮಲಯಾಳಂ ಬಳಿಕ ಅನೇಕ ಚಿತ್ರರಂಗಗಳಿಂದ ಆಫರ್ ಗಳು ಬರತೊಡಗಿವೆ.

ಕನ್ನಡದಲ್ಲಿ ನಟಿಸುವಂತೆ ನಿರ್ದೇಶಕ ಯೋಗಿ ಆಹ್ವಾನಿಸಿದ್ದು ಇದಕ್ಕೆ ಪ್ರಿಯಾ ಒಪ್ಪಿದ್ದಾರೆ. ಯೋಗಿ ನಟಿಸಿ, ನಿರ್ದೇಶಿಸಲಿರುವ ‘ಯೋಗಿ ಲವ್ಸ್ ಸುಪ್ರಿಯಾ’ ಚಿತ್ರದಲ್ಲಿ ಪ್ರಿಯಾ ಪ್ರಕಾಶ್ ವಾರಿಯರ್ ಅಭಿನಯಿಸಲಿದ್ದಾರೆ. ಕಣ್ಸನ್ನೆ ವಿಡಿಯೊ ಹಲ್ ಚಲ್ ಎಬ್ಬಿಸಿದ ಬಳಿಕ ಪ್ರಿಯಾ ಅವರಿಗೆ ಬೆದರಿಕೆ ಕರೆ ಬಂದ ಹಿನ್ನಲೆಯಲ್ಲಿ ಫೋನ್ ಸ್ವಿಚ್ ಆಫ್ ಮಾಡಿದ್ದಾರೆ.

‘ಒರು ಆಡಾರ್ ಲವ್’ ನಿರ್ದೇಶಕರ ಮೂಲಕ ಪ್ರಿಯಾರನ್ನು ಸಂಪರ್ಕಿಸಿದ ಯೋಗಿ ತಮ್ಮ ಚಿತ್ರದ ಕತೆ ಬಗ್ಗೆ ತಿಳಿಸಿದ್ದು, ಇದಕ್ಕೆ ಪ್ರಿಯಾ ಒಪ್ಪಿಗೆ ಸೂಚಿಸಿದ್ದಾರೆ. ಕನ್ನಡ ಚಿತ್ರದಲ್ಲಿ ನಟಿಸಲು ಅವರು ಒಪ್ಪಿದ್ದು, ಶೀಘ್ರವೇ ಚಿತ್ರೀಕರಣ ಆರಂಭಿಸಲು ಪ್ಲಾನ್ ಮಾಡಲಾಗಿದೆ.

NO COMMENTS

LEAVE A REPLY