ಇಂದು ಹೊಸ ಪಕ್ಷ ಘೋಷಣೆ ಮಾಡಲಿರುವ ನಟ ಕಮಲ್ ಹಾಸನ್..!

ಇಂದು ಹೊಸ ಪಕ್ಷ ಘೋಷಣೆ ಮಾಡಲಿರುವ ನಟ ಕಮಲ್ ಹಾಸನ್..!

175
0
SHARE

ಚೆನ್ನೈ(ಫೆ.21.2018): ಹಲವು ಬಗೆಯ ಭಾರಿ ನಿರೀಕ್ಷೆಗಳನ್ನು ಹುಟ್ಟು ಹಾಕಿರುವ ತಮಿಳು ನಟ ಕಮಲ್‌ ಹಾಸನ್‌ ಅವರ ಹೊಸ ರಾಜಕೀಯ ಪಕ್ಷದ ಘೋಷಣೆಗೆ ಮುಹೂರ್ತ ಇಂದು ಫಿಕ್ಸ್‌ ಆಗಿದೆ.

ಮದುರೈನಲ್ಲಿ ಬುಧವಾರ ಸಂಜೆ ನಡೆಯಲಿರುವ ಸಮಾರಂಭದಲ್ಲಿ ಹೊಸ ಪಕ್ಷ ಘೋಷಿಸುವ ಮೂಲಕ ಅಧಿಕೃತವಾಗಿ ರಾಜಕಾರಣಕ್ಕೆ ಎಂಟ್ರಿ ಕೊಡಲಿದ್ದಾರೆ. ಸೂಪರ್‌ ಸ್ಟಾರ್‌ ರಜನಿಕಾಂತ್‌ ರಂಗ ಪ್ರವೇಶವಾಗಿದ್ದು, ಅವರ ಬೆನ್ನಲ್ಲೇ ಕಮಲ್‌ ರಾಜಕೀಯ ಪ್ರವೇಶಿಸುತ್ತಿರುವುದು ವಿಶೇಷವಾಗಿದೆ. 

”ಆಡಳಿತಾರೂಢ ಎಐಎಡಿಎಂಕೆ ಅತ್ಯಂತ ಕೆಟ್ಟ ಪಕ್ಷವಾಗಿದೆ. ರಾಜ್ಯದಲ್ಲಿ ಸರಕಾರಿ ವ್ಯವಸ್ಥೆ ಜಿಡ್ಡುಗಟ್ಟಿದ್ದು, ವಿನೂತನ ಬಗೆಯ ಸುಧಾರಣೆಗಳ ಆಶಯದೊಂದಿಗೆ ಹೊಸ ಪಕ್ಷ ರಚಿಸಿದ್ದು, ನಮ್ಮ ಕಾರ್ಯನೀತಿ ಹಾಗೂ ಯೋಜನೆಗಳ ಕುರಿತು ಬುಧವಾರದ ಕಾರ್ಯಕ್ರಮದಲ್ಲಿ ಬಹಿರಂಗಪಡಿಸುತ್ತೇನೆ,” ಎಂದು ಹೇಳಿದ್ದಾರೆ.

ಆರಂಭದಲ್ಲಿ ರಾಮನಾಥಪುರಂ, ಮದುರೈ, ದಿಂಡಿಗಲ್‌ ಜಿಲ್ಲೆಗಳಲ್ಲಿ ಪ್ರವಾಸ ಮಾಡುವ ಉದ್ದೇಶ ಹೊಂದಿರುವ ಕಮಲ್‌, ಸಮಾರಂಭಕ್ಕೆ ಟ್ವಿಟರ್‌ ಮೂಲಕ ಅಭಿಮಾನಿಗಳಿಗೆ ಆಮಂತ್ರಣ ನೀಡಿದ್ದಾರೆ. ಈ ಮಧ್ಯೆ ನಾಮ್‌ ತಮಿಳರ್‌ ಕಚ್ಚಿ ಪಕ್ಷದ ಸಂಸ್ಥಾಪಕ ಸೀಮನ್‌ ಅವರು ಕಮಲ್‌ ಹಾಸನ್‌ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ

NO COMMENTS

LEAVE A REPLY