ಕಾಂಗ್ರೆಸ್‌, ಬಿಜೆಪಿಯಿಂದ ಮಹದಾಯಿ ವಿವಾದ ಬಗೆಹರಿಯುವುದಿಲ್ಲ: ಎಚ್.ಡಿ ಕುಮಾರಸ್ವಾಮಿ

ಕಾಂಗ್ರೆಸ್‌, ಬಿಜೆಪಿಯಿಂದ ಮಹದಾಯಿ ವಿವಾದ ಬಗೆಹರಿಯುವುದಿಲ್ಲ: ಎಚ್.ಡಿ ಕುಮಾರಸ್ವಾಮಿ

394
0
SHARE

ಹುಬ್ಬಳ್ಳಿ(ಫೆ.20.2018): ಮಹದಾಯಿ ವಿವಾದವನ್ನು ಬಗೆ ಹರಿಸುವುದಾಗಿ ಬಿ;ಎಸ್‌. ಯಡಿಯೂರಪ್ಪ ಹೇಳಿದ್ದಾರೆ. ಹೀಗಿದ್ದಾಗ ಗಡ್ಕರಿ ಹೇಳಿಕೆಯಲ್ಲಿ ವಿಶೇಷ ಏನಿದೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ತಿಳಿಸಿದ್ದಾರೆ. 

ಹುಬ್ಬಳ್ಳಿಯಲ್ಲಿ ಮಂಗಳವಾರ ನಡೆದ ಕುಮಾರ ಪರ್ವ ಕಾರ್ಯಕ್ರಮದಲ್ಲಿ  ಮಾತನಾಡಿದ ಕುಮಾರಸ್ವಾಮಿ. ಜನರು ನಂಬಿಕೆ ಇಟ್ಟು ಮತ ನೀಡಿರುತ್ತಾರೆ, ಆ ಮತದಾನದಲ್ಲಿರುವ ಶಕ್ತಿಯನ್ನು ಜನಪ್ರತಿನಿಧಿಗಳು ಅರ್ಥ ಮಾಡಿಕೊಳ್ಳಬೇಕು. ಹಾಗೆ, ಮತ ನೀಡಿದ ಪ್ರತಿಯೊಬ್ಬ ವ್ಯಕ್ತಿಯು ಸಹ ಸರಕಾರ ದಾರಿ ತಪ್ಪಿದಾಗ ಕಿವಿ ಹಿಂಡುವ ಕಾರ್ಯ ಮಾಡಬೇಕಿದೆ ಎಂದು ಅವರು ಹೇಳಿದರು. 

ಕಳಸಾ ಬಂಡೂರಿ ಯೋಜನೆಗೆ ಅಡಿಗಲ್ಲು ಇಟ್ಟಿದ್ದೇ ನಾನು. ಅದರ ಯಶಸ್ಸು ಜೆಡಿಎಸ್ ಗೆ ಸಲ್ಲುತ್ತದೆ. ಎರಡು ಪಕ್ಷಗಳು ರಾಜಕೀಯ ಮಾಡುತ್ತ ಕಾಲ ವಿಳಂಬ ಮಾಡುತ್ತಿವೆ. ಈ ವಿಷಯದಲ್ಲಿ ಪ್ರಧಾನಿ ಮನಸ್ಸು ಮಾಡಿದರೆ ಅತಿ ಶೀಘ್ರದಲ್ಲಿಯೇ ಪರಿಹಾರ ದೊರೆಯುತ್ತದೆ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು. 

NO COMMENTS

LEAVE A REPLY