ಕಮೀಷನ್ ಏಜೆಂಟ್ ನರೇಂದ್ರ ಮೋದಿ: ಸಿಎಂ ತಿರುಗೇಟು.!

ಕಮೀಷನ್ ಏಜೆಂಟ್ ನರೇಂದ್ರ ಮೋದಿ: ಸಿಎಂ ತಿರುಗೇಟು.!

257
0
SHARE

ಮೈಸೂರು(ಫೆ20.2018):ನಿನ್ನೆ ಮೈಸೂರಿನಲ್ಲಿ ನಡೆದ ಬಿಜೆಪಿ ಬೃಹತ್ ಸಮಾವೇಶದಲ್ಲಿ ಕಮೀಷನ್ ಹೇಳಿಕೆ ವಿಚಾರವನ್ನು ಪ್ರಸ್ತಾಪಿಸಿ ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಕಮೀಷನ್ ಏಜೆಂಟ್ ಮೋದಿ ನಮ್ಮ ವಿರುದ್ಧ ಮಾಡಿದ ಆರೋಪಕ್ಕೆ ದಾಖಲೆ ನೀಡಲಿ ಎಂದು ಸಿಎಂ ಸಿದ್ದರಾಮಯ್ಯ ಪ್ರಧಾನಿ ಮೋದಿಗೆ ಟಾಂಗ್ ನೀಡಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಯಡಿಯೂರಪ್ಪ ಸರ್ಕಾರದ ಅವಧಿಯಲ್ಲಿ ಹೆಚ್ಚು ಕಮೀಷನ್ ಹೊಡೆದಿರೋದು. ಯಡಿಯೂರಪ್ಪ ಅಂದಿನ ಸರ್ಕಾರ ೧೦೦% ಕಮೀಷನ್ ಸರ್ಕಾರ ಆಗಿತ್ತು. ಪ್ರಧಾನಿ ಮೋದಿ ಅವ್ರಿಗೆ ದೇಶದ, ರಾಜ್ಯದ ಸಮಸ್ಯೆಗಳು ಕಾಣ್ತಿಲ್ಲ ಎಂದು ಕಿಡಿಕಾರಿದರು.

ಸಾಲ ಮನ್ನಾ , ರೈತರ ಸಮಸ್ಯೆ, ವಿವಿಧ ಸಮಸ್ಯೆಗಳ ಬಗ್ಗೆ ಮಾತನಾಡದೇ ಕೇವಲ ಕಮೀಷನ್ ವಿಚಾರ ಮಾತ್ರ ಪ್ರಸ್ತಾಪ ಮಾಡಿದ್ದಾರೆ. ಅವರದ್ದೇ ಸರ್ಕಾರ ಇದೆ. ಕಮೀಷನ್ ಬಗ್ಗೆ ಮಾಹಿತಿ ಇದ್ರೆ ನೀಡಲಿ ಎಂದು ಸಿಎಂ ಸಿದ್ದರಾಮಯ್ಯ ಆಗ್ರಹಿಸಿದರು.

ನೀರವ ಮೋದಿ ಸಾವಿರಾರು ಕೋಟಿ ಟೋಪಿ ಹಾಕಿ ಹೋಗಿದ್ದಾರೆ. ಇವರ ಕುಮ್ಮಕ್ಕಿಲ್ಲದೇ ಓಡಿ ಹೋಗಿದ್ದಾರಾ ? ನಾನಾಗಿದ್ದರೆ ಖಂಡಿತ ಬಿಡ್ತಿರಲಿಲ್ಲ. ಪ್ರಧಾನಿ ಆರೋಪಗಳೆಲ್ಲಾ ಬೇಸ್ ಲೆಸ್ ಹಿಂದಿನ ಸರ್ಕಾರದಲ್ಲಿ ಲೂಟಿ ಮಾಡಿ ಜೈಲಿಗೆ ಹೋದವರನ್ನ ಪಕ್ಕದಲ್ಲಿ ಕೂರಿಸಿಕೊಂಡು ಮೋದಿ ಭ್ರಷ್ಟಾಚಾರದ ಬಗ್ಗೆ ಮಾತಾಡ್ತಾರೆ. ಅತೀ ಭ್ರಷ್ಟ ಪ್ರಧಾನಿ ಮೋದಿ ಎಂದು ಆರೋಪಿಸಿದರು.

ನಲಪಾಡ್ ಹಾಗೂ ನಾರಾಯಣಸ್ವಾಮಿ ಪ್ರಕರಣಗಳಲ್ಲಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.

NO COMMENTS

LEAVE A REPLY