ಭಾಷಣದಲ್ಲಿ ಪ್ರತಾಪ್ ಸಿಂಹರನ್ನು ಪ್ರಶಂಸಿದ ಮೋದಿ…

ಭಾಷಣದಲ್ಲಿ ಪ್ರತಾಪ್ ಸಿಂಹರನ್ನು ಪ್ರಶಂಸಿದ ಮೋದಿ…

230
0
SHARE

ಮೈಸೂರು(ಫೆ.19.2018): ಹಲವು ಯೋಜನೆಗಳಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ, ಇಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಜನತೆಯನ್ನು ಉದ್ದೇಶಿಸಿ ಮಾತನಾಡಿದರು.

ಕನ್ನಡದಲ್ಲಿಯೇ ಭಾಷಣ ಆರಂಭಿಸಿದ ಮೋದಿ, ಚಾಮುಂಡೇಶ್ವರಿಗೂ ನಮಿಸಿ, ಮೈಸೂರಿನ ಪ್ರಸಿದ್ಧ ವಸ್ತುಗಳನ್ನು ಹೆಸರಿಸಿ, ಮೈಸೂರು ಅರಸರು, ವಿಶ್ವೇಶ್ವರಯ್ಯ, ಬಾಲಗಂಗಾಧರನಾಥ ಸ್ವಾಮೀಜಿ, ಸುತ್ತೂರು ಸ್ವಾಮಿಗಳು ಅವರಂಥ ಮಹಾಪುರುಷರ ನಾಡಿದು, ಎಂದು ಮೈಸೂರನ್ನು ಶ್ಲಾಘಿಸಿದರು.

ಪ್ರತಾಪ್ ಸಿಂಹನಿಗೆ ಶ್ಲಾಘನೆ

ತಮ್ಮ ಭಾಷಣದಲ್ಲಿ ಪ್ರತಾಪಸಿಂಹರನ್ನು ಪ್ರಶಂಸಿದ ಮೋದಿ, ನಿಮ್ಮ ಸಂಸದ ಪ್ರತಾಪ ಸಿಂಹ ನಮ್ಮ ಬಳಿಗೆ ಯಾವಾಗಲೂ, ಯಾವುದಾದರೂ ಯೋಜನೆ ಹಿಡಿದು ಬರುತ್ತಾರೆ.  ನಮ್ಮನ್ನು ನೆಮ್ಮದಿಯಿಂದ ಕೂರಲು ಬಿಡಲ್ಲ. ಬೆಂಗಳೂರು ಮೈಸೂರು ನಡುವೆ ಅಷ್ಟಪಥಗಳ ರಾಷ್ಟ್ರೀಯ ಹೆದ್ದಾರಿ ರಚನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. 

ಅಲ್ಲದೆ ಮೈಸೂರಿಗೆ ಹೊಸ ವಿಶ್ವದರ್ಜೆಯ ಸ್ಯಾಟಲೈಟ್ ರೈಲ್ವೆ ಸ್ಟೇಷನ್ ನನ್ನು ನಾಗನಹಳ್ಳಿ ಬಳಿ ನಿರ್ಮಿಸಲಾಗುತ್ತದೆ. ಇದರಿಂದ 76 ರೈಲುಗಳು ಮೈಸೂರಿನಲ್ಲಿ ಸಂಚರಿಸಲಿವೆ, ಎಂದರು.

ಕರ್ನಾಟಕ  ಕಾಂಗ್ರೆಸ್ಸನ್ನು  ಬಹಿಷ್ಕರಿಸಲಿದೆ.

 ಕಾಂಗ್ರೆಸ್ ವಿರುದ್ಧ ತಮ್ಮ ವಾಗ್ದಾಳಿಯನ್ನು ಮುಂದುವರಿಸಿದ ಮೋದಿ, ‘ರಾಜ್ಯದಲ್ಲಿ ಜನರನ್ನು ದಿಕ್ಕು ತಪ್ಪಿಸುವ ಕೆಲಸವನ್ನು ಮಾಡುತ್ತಿದೆ, ಕಾಂಗ್ರೆಸ್ ಸರಕಾರ. ಆದರಿನ್ನು ಜನರು ಆ ಪಕ್ಷವನ್ನು ನಂಬುವುದಿಲ್ಲ. ಸಣ್ಣ ಮನಸ್ಸಿನ ಈ ಜನರಿಗೆ, ತಮ್ಮ ಕುರ್ಚಿ ಮುಖ್ಯವೇ ಹೊರತು, ರಾಜ್ಯದ ಅಭಿವೃದ್ಧಿಯಲ್ಲಿ,’ ಎಂದು ಆರೋಪಿಸಿದರು. 

NO COMMENTS

LEAVE A REPLY