ಒಟರ್ ಐಡಿ ಮಾಡಿಸುವವರಿಗೆ ಕೊನೆಯ ಅವಕಾಶ..!

ಒಟರ್ ಐಡಿ ಮಾಡಿಸುವವರಿಗೆ ಕೊನೆಯ ಅವಕಾಶ..!

216
0
SHARE

ಬೆಂಗಳೂರು(ಫೆ.19.2018) : ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಿಕೊಳ್ಳಲು ಫೆ.28 ರವರೆಗೂ ಅವಕಾಶ ಕಲ್ಪಿಸಲಾಗಿದ್ದು, ಈಗಾಗಲೇ ಹೆಸರು ಸೇರ್ಪಡೆ ಮಾಡಿರುವವರು ಹಾಗೂ ಹೊಸದಾಗಿ ಸೇರ್ಪಡೆ ಮಾಡುವವರಿಗೆ ಮಾರ್ಚ್ 15ರವರೆಗೆ ಮತದಾರರ ಗುರುತಿನ ಚೀಟಿ ತಲುಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದುವರೆಗೂ 4,96,56,059 ಮಂದಿ ಮತದಾರರಿದ್ದು, ಇನ್ನಷ್ಟು ಮಂದಿ ಹೆಚ್ಚಾಗುವ ಸಾಧ್ಯತೆಗಳಿವೆ. ಫೆ. 28 ರೊಳಗೆ ಮತದಾರರ ಪಟ್ಟಿಗೆ ಸೇರ್ಪಡೆ, ಹೆಸರು ತೆಗೆಸುವುದು ಹಾಗೂ ಬದಲಾವಣೆ ಇದ್ದರೆ ಮಾಡಬಹುದು ಎಂದು ಹೇಳಿದರು.

ಕಳೆದ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ, ಈ ಬಾರಿಯ ವಿಧಾನಸಭಾ ಚುನಾವಣೆಗೆ 7 ಲಕ್ಷದ 72 ಸಾವಿರ ಯುವ ಮತದಾರರೂ ಸೇರಿದಂತೆ, ಒಟ್ಟು 15,42,121 ಮತದಾರರು ಸೇರ್ಪಡೆಯಾಗಿದ್ದಾರೆ. 3,67,424 ಮಂದಿ ಮೃತಪಟ್ಟವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ.

ಅದೇ ರೀತಿ ಒಂದಕ್ಕಿಂತ ಹೆಚ್ಚು ಕಡೆ ಹೆಸರಿದ್ದ 61,792 ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಅಲ್ಲದೆ ಬದಲಾವಣೆ ಬಯಸಿದ್ದ 5,84,438 ಅರ್ಜಿ ಸೇರಿದಂತೆ, ಒಟ್ಟು 10,48,668 ಅರ್ಜಿಗಳು ಬಂದಿದ್ದವು. ಅದರಲ್ಲಿ 10,13,704 ಅರ್ಜಿಗಳನ್ನು ಇತ್ಯರ್ಥ ಮಾಡಲಾಗಿದೆ ಎಂದು ಹೇಳಿದರು.

ಇಂದಿನವರೆಗೂ 4,96,56,059 ಮತದಾರರಿದ್ದಾರೆ. ಅದರಲ್ಲಿ 2,51,79,219 ಪುರುಷರು, 2,44,72,228 ಮಹಿಳೆಯರು ಹಾಗೂ 4,552 ತೃತೀಯ ಲಿಂಗಿ ಮತದಾರರು ಇದ್ದಾರೆ.

ಒಟ್ಟಾರೆ ಸರಾಸರಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 2 ಲಕ್ಷ 21 ಸಾವಿರ ಮತದಾರರು ಇದ್ದಾರೆ. ಈ ಬಾರಿ ದಾಖಲೆಯ ಪ್ರಮಾಣದಲ್ಲಿ ಹೊಸ ಮತದಾರರು ಸೇರ್ಪಡೆಯಾಗಿದ್ದಾರೆ ಎಂದು ವಿವರಿಸಿದರು.

NO COMMENTS

LEAVE A REPLY