ಮೇಲುಕೋಟೆ ಶಾಸಕ ಪುಟ್ಟಣ್ಣಯ್ಯ ನಿಧನ

ಮೇಲುಕೋಟೆ ಶಾಸಕ ಪುಟ್ಟಣ್ಣಯ್ಯ ನಿಧನ

785
0
SHARE

ಬಿಗ್ ಬ್ರೇಕಿಂಗ್ : ರೈತ ಮುಖಂಡ, ಶಾಸಕ ಕೆ.ಎಸ್ ಪುಟ್ಟಣ್ಣಯ್ಯ ಹೃದಯಾಘಾತದಿಂದ ನಿಧನ

Sunday, 18 Feb, 10.59 pm

ಮಂಡ್ಯ: ರೈತ ಮುಖಂಡ, ಶಾಸಕ ಕೆ.ಎಸ್ ಪುಟ್ಟಣ್ಣಯ್ಯ ಹೃದಯಘಾತದಿಂದ ಮೃತಪಟ್ಟಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.

ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆದ ಕಬ್ಬಡಿ ಪಂದ್ಯವಾಳಿಯನ್ನು ನೋಡಿಕೊಂಡು ಅವರು ಪಾಂಡವಪುರಕ್ಕೆ ವಾಪಸ್ಸು ಬರುತ್ತಿದ್ದ ವೇಳೆಯಲ್ಲಿ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ ಕೂಡಲೇ ಅವರನ್ನು ಹೆಚ್ಚಿನ ಚಿಕತ್ಸೆಗಾಗಿ ಮಂಡ್ಯದ ಮಿಮ್ಸ್ ಕರೆ ತರಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಮೃತದೇಹವನ್ನು ಕೆ.ಎಸ್ ಪುಟ್ಟಣ್ಣಯ್ಯ ಅವರ ಹುಟ್ಟೂರಾದ ಕ್ಯಾತನಹಳ್ಳಿಯಲ್ಲಿರುವ ಕೆ.ಎಸ್ ಪುಟ್ಟಣ್ಣಯ್ಯ ಅವರ ತೋಟದ ಮನೆಯಲ್ಲಿ ಸೋಮವಾರ ಅಂತ್ಯಕ್ರಿಯೆ ನಡೆಸಲಾಗುವುದು ಅಂತ ತಿಳಿದು ಬಂದಿದ್ದು, ಅದಕ್ಕೂ ಮುನ್ನ ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಮೃತ ದೇಹವನ್ನು ಇಡಲು ನಿರ್ಧಾರಮಾಡಲಾಗಿದ್ದು, ಈ ಬಗ್ಗೆ ಈಗಾಗಾಲೇ ಎಲ್ಲಾ ವ್ಯವಸ್ಥೆಗಳು ಜಿಲ್ಲಾಡಳಿತದಿಂದ ನಡೆಸಲಾಗುತ್ತಿದೆ ಅಂತ ತಿಳಿದು ಬಂದಿದೆ.

ಪುಟ್ಟಣ್ಣಯ್ಯ ಕರ್ನಾಟಕ ರೈತ ಸಂಘ ಕಂಡಂತಹ ಏಕೈಕ ಧೀಮಂತ ಹೋರಾಟಗಾರ.

NO COMMENTS

LEAVE A REPLY