ಫ್ಲೋರಿಡಾ ಶಾಲೆಗೆ ಉಗ್ರರ ದಾಳಿ: ಮಕ್ಕಳನ್ನು ಉಳಿಸಿದ ಭಾರತೀಯ ಶಿಕ್ಷಕಿ

ಫ್ಲೋರಿಡಾ ಶಾಲೆಗೆ ಉಗ್ರರ ದಾಳಿ: ಮಕ್ಕಳನ್ನು ಉಳಿಸಿದ ಭಾರತೀಯ ಶಿಕ್ಷಕಿ

263
0
SHARE

ನ್ಯೂಯಾರ್ಕ್(ಫೆ.18.2018): ಫ್ಲೊರಿಡಾದ ಡೋಂಗ್ಲಾಸ್‌ ಹೈಸ್ಕೂಲ್‌ ಮೇಲೆ ಬುಧವಾರ ನಡೆದ ದಾಳಿ ವೇಳೆ ಭಾರತೀಯ-ಅಮೆರಿಕನ್‌ ಗಣಿತ ಶಿಕ್ಷಕಿ ಶಾಂತಿ ವಿಶ್ವನಾಥನ್‌ ಮುಂಜಾಗರೂಕತೆ ವಹಿಸಿ ಅನೇಕ ಮಕ್ಕಳ ಪ್ರಾಣ ಉಳಿಸಿದ್ದಾರೆಂಬ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.

ಶಾಂತಿ ವಿಶ್ವನಾಥನ್‌ ದಾಳಿ ವೇಳೆ ತರಗತಿಯ ಬಾಗಿಲು ಕಿಟಕಿಗಳನ್ನು ಪರದೆಯಿಂದ ಮುಚ್ಚಿ, ಬಂಧೂಕುದಾರಿ ವ್ಯಕ್ತಿಯ ಕಣ್ಣಿಗೆ ಕಾಣದಂತೆ ಅವಿತುಕೊಳ್ಳಲು ಮಕ್ಕಳಿಗೆ ಸೂಚಿಸಿದರು. ಅಲ್ಲದೆ ಬಂಧೂಕುಧಾರಿಯು ಪೊಲೀಸ್‌ ವೇಷದಲ್ಲಿ ಬಾಗಿಲು ತೆಗೆಯುವಂತೆ ಕೇಳಿಕೊಂಡರೂ ನಂಬದೆ ಬಾಗಿಲು ತೆಗೆಯಲಿಲ್ಲ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

ತಮ್ಮ ಜೀವವನ್ನೂ ಲೆಕ್ಕಿಸದೆ ಮಕ್ಕಳನ್ನು ರಕ್ಷಿಸಿದ ಶಾಂತಿ ವಿಶ್ವನಾಥನ್‌ ಅವರನ್ನು ದೇಶಾದ್ಯಂತ ಪ್ರಶಂಸಿಲಾಗುತ್ತಿದೆ. ಈ ದಾಳಿಯಲ್ಲಿ 15 ವಿದ್ಯಾರ್ಥಿಗಳು ಹಾಗೂ ಇಬ್ಬರು ಸಿಬ್ಬಂದಿಗಳು ಸೇರಿ 17ಜನ ಮೃತಪಟ್ಟಿದ್ದರು.

NO COMMENTS

LEAVE A REPLY