ಮೈಸೂರಿನಲ್ಲಿ ಶಾಲಾ ವಾಹನ ಅಪಘಾತ: 8 ಮಕ್ಕಳಿಗೆ ಗಂಭೀರ ಗಾಯ

ಮೈಸೂರಿನಲ್ಲಿ ಶಾಲಾ ವಾಹನ ಅಪಘಾತ: 8 ಮಕ್ಕಳಿಗೆ ಗಂಭೀರ ಗಾಯ

197
0
SHARE

ಮೈಸೂರು(ಫೆ.17.2018):ಮರಕ್ಕೆ ಖಾಸಗಿ ಶಾಲಾ ವಾಹನ ಡಿಕ್ಕಿ ಹೊಡೆದ ಪರಿಣಾಮ 8 ಮಕ್ಕಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

ಮೈಸೂರು‌ ಜಿಲ್ಲೆ ಹುಣಸೂರು ತಾಲೂಕು ಬಿಳಿಕೆರೆ ಸಮೀಪ ಮೂಡಲ ಕೊಪ್ಪಲು ಗ್ರಾಮದ ಬಳಿ ಈ ಘಟನೆ ನಡೆದಿದೆ. ಬ್ರೇಕ್ ವೈಫಲ್ಯದಿಂದಾಗಿ ಶಾಲಾವಾಹನ ಚಾಲಕ ಮರಕ್ಕೆ ಡಿಕ್ಕಿ ಹೊಡೆಸಿದ್ದಾನೆ. ಅಪಘಾತದಲ್ಲಿ 8 ಕ್ಕೂ ಹೆಚ್ಚು ಮಕ್ಕಳಿಗೆ ಗಂಭೀರ ಗಾಯಗೊಂಡಿದ್ದು, ಗಾಯಗೊಂಡ ಮಕ್ಕಳನ್ನು ಹುಣಸೂರು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಮೈಸೂರು, ಬಿಳಿಕೆರೆ, ಹುಣಸೂರು ಆಸ್ಪತ್ರೆಗಳಿಗೆ ರವಾನೆ ಮಾಡಲಾಗಿದೆ.  ಬಿಳಿಕೆರೆಯ ಅರಳು‌ಮಲ್ಲಿಗೆ ಶಾಲೆಯ ಮಕ್ಕಳು ಎಂದು ಗುರುತಿಸಲಾಗಿದೆ.

ಘಟನೆ ನಡೆದ ತಕ್ಷಣ ಸ್ಥಳೀಯ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿದ್ದು, ಅರಳುವ ಮುನ್ನವೇ ಸ್ವಲ್ಪದರಲ್ಲೇ ಬಾಡಿ ಹೋಗುತ್ತಿದ್ದ ಮಕ್ಕಳು ಗ್ರಾಮಸ್ಥರ ನೆರವಿನಿಂದ ಬದುಕುಳಿದಿದ್ದಾರೆ. ಈ ಕುರಿತು ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

NO COMMENTS

LEAVE A REPLY