ರಾಜ್ಯ ಬಜೆಟ್‌: ಎಸ್‌ಸಿ.ಎಸ್‌ಟಿ ಅಭ್ಯರ್ಥಿಗಳಿಗೆ 15 ಲಕ್ಷ ರೂ.ವರೆಗೆ ಬಡ್ಡಿರಹಿತ ವಾಹನ ಸಾಲ..

ರಾಜ್ಯ ಬಜೆಟ್‌: ಎಸ್‌ಸಿ.ಎಸ್‌ಟಿ ಅಭ್ಯರ್ಥಿಗಳಿಗೆ 15 ಲಕ್ಷ ರೂ.ವರೆಗೆ ಬಡ್ಡಿರಹಿತ ವಾಹನ ಸಾಲ..

257
0
SHARE

ಮೈಸೂರು(ಫೆ.17.2018):ಪರಿಶಿಷ್ಟ ಜಾತಿ ಮತ್ತು ಪಂಗಡದ ಯುವಕರಿಗೆ ಭಾರಿ ವಾಹನ ಚಾಲನಾ ತರಬೇತಿ ನೀಡುವುದರ ಜತೆಗೆ ಆ ಅಭ್ಯರ್ಥಿಗಳಿಗೆ ವಾಹನ ಖರೀದಿಗೆ 15 ಲಕ್ಷ ರೂ.ವರೆಗೆ ಶೂನ್ಯ ಬಡ್ಡಿದರದಲ್ಲಿ ಸರ್ಕಾರ ಸಾಲ ನೀಡಲಿದೆ.

ಎಸ್‌ಸಿಎಸ್‌ಟ/ಟಿಎಸ್‌ಪಿ “ವಿಶೇಷ ಘಟಕ ಯೋಜನೆ’ ಅಡಿ 200 ಅಭ್ಯರ್ಥಿಗಳಿಗೆ ಬೆಂಗಳೂರು ಮತ್ತು ಧಾರವಾಡದಲ್ಲಿರುವ ಭಾರಿ ವಾಹನ ಚಾಲಕರ ತರಬೇತಿ ಸಂಸ್ಥೆಗಳಲ್ಲಿ ವಾಹನ ಚಾಲನ ತರಬೇತಿ ನೀಡಿ, ಶೂನ್ಯ ಬಡ್ಡಿದರದಲ್ಲಿ ಸಾಲ ಕೂಡ ನೀಡಲಾಗುವುದು. ಇದಕ್ಕಾಗಿ 2.50 ಕೋಟಿ ರೂ. ಬಜೆಟ್‌ನಲ್ಲಿ ಒದಗಿಸಲಾಗಿದೆ. 

ಇದಲ್ಲದೆ, ನಿರುದ್ಯೋಗಿ ಮಹಿಳೆಯರಿಗೂ ಸ್ವಯಂ ಉದ್ಯೋಗ ಕಲ್ಪಿಸಲು ಪ್ರಸಕ್ತ ಸಾಲಿನಲ್ಲಿ 1,100 ಮಹಿಳೆಯರಿಗೆ ಲಘು ಮೋಟಾರು ಚಾಲನಾ ತರಬೇತಿಗೆ ಉದ್ದೇಶಿಸಿದೆ. ಅಲ್ಲದೆ, ಯುವಕರಿಗೆ ಕೌಶಲ್ಯ , ಸಾಮರ್ಥ್ಯ ವೃದಿಟಛಿಗೆ ಸಾರಿಗೆ ಸಂಸ್ಥೆಗಳಿಂದ 13 ಸಾವಿರ ಯುವಕರಿಗೆ ಚಾಲನೆ ಮತ್ತು ಮೆಕಾನಿಕ್‌ ತರಬೇತಿ ನೀಡಲು ಉದ್ದೇಶಿಸಲಾಗಿದೆ.

NO COMMENTS

LEAVE A REPLY