ನೀರಿಗಾಗಿ ಎರಡು ಗ್ರಾಮಗಳ ನಡುವೆ ಮಹಾ ಮರಾಮಾರಿ: ಲಾಠಿಚಾರ್ಜ್, ನಿಷೇಧಾಜ್ಞೆ ಜಾರಿ..‌

ನೀರಿಗಾಗಿ ಎರಡು ಗ್ರಾಮಗಳ ನಡುವೆ ಮಹಾ ಮರಾಮಾರಿ: ಲಾಠಿಚಾರ್ಜ್, ನಿಷೇಧಾಜ್ಞೆ ಜಾರಿ..‌

169
0
SHARE

ಚಿಕ್ಕಮಗಳೂರು(ಫೆ.9.2018): ನೀರಿನ ವಿಚಾರವಾಗಿ ಜಿಲ್ಲೆಯ ಸಖರಾಯಪಟ್ಟಣ ಹಾಗೂ ಜಿಗಣೆಹಳ್ಳಿ ಗ್ರಾಮಗಳ ನಡುವೆ ತಿಕ್ಕಾಟ ಉಂಟಾಗಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದು, ಧರಣಿನಿರತರ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ.

ಒಂದು ಊರಿಗೆ ನೀರು ಹರಿಸಿದ್ದಕ್ಕಾಗಿ ಮತ್ತೊಂದು ಊರಿನವರು ಗಲಾಟೆ ಮಾಡಿದ್ದಾರೆ. ಸಖರಾಯಪಟ್ಟಣದ ಅಯ್ಯನ್ ಕೆರೆಯಿಂದ ಕಡೂರು ಭಾಗದ ಪ್ರದೇಶಗಳಿಗೆ ಮೊನ್ನೆ, ನಿನ್ನೆ ನೀರು ಹರಿಸಲಾಗಿತ್ತು. ಇದಕ್ಕೆ ತಕರಾರು ತೆಗದು ಸಖರಾಯಪಟ್ಟಣದ ನಿವಾಸಿಗಳು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದರು. ಕೆರೆಯಲ್ಲಿ ನಾಲ್ಕೈದು ಅಡಿ ನೀರು ಮಾತ್ರ ಇದೆ. ನಮಗೆ ಕುಡಿಯುವ ನೀರಿನ ಕೊರತೆಯಾಗುತ್ತದೆ. ನೀರು ಬಿಡಬೇಡಿ ಎಂದು ಡಿಸಿಗೆ ಮನವಿ ಮಾಡಿಕೊಂಡಿದ್ದರು. ಆದರೆ ಇದಕ್ಕೆ ಜಿಲ್ಲಾಡಳಿತ ಸ್ಪಂದಿಸದ ಕಾರಣ ಸಖರಾಯಪಟ್ಟಣ ಗ್ರಾಮಸ್ಥರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.

ಆದರೆ ಕಾಲುವೆಗೆ ನೀರು ಬಿಡುಗಡೆ ಮಾಡದಂತೆ ಆಗ್ರಹಿಸಿ ಸಖರಾಯಪಟ್ಟಣ ಗ್ರಾಮಸ್ಥರು ನಿನ್ನೆಯಿಂದ ಪ್ರತಿಭಟನೆ ನಡೆಸುತ್ತಿದ್ದರು. ಈ ನಡುವೆ ಇಂದು ಪ್ರತಿಭಟನೆ ವಿಕೋಪಕ್ಕೆ ತಿರುಗಿದ್ದು, ಧರಣಿನಿರತರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ ಎನ್ನಲಾಗಿದೆ.

ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಪ್ರತಿಭಟನಾಕಾರರ ಮೇಲೆ ಲಾಠಿ ಬೀಸಿದ್ದಾರೆ. ಲಾಠಿಚಾರ್ಜ್ ವೇಳೆ ಹಲವರಿಗೆ ಗಾಯಗಳಾಗಿದೆ. ಸಖರಾಯಪಟ್ಟಣದಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದ್ದು, ತಹಶೀಲ್ದಾರ್ ಭಾಗ್ಯ ಅವರು ಪಟ್ಟಣದಲ್ಲಿ 144 ಸೆಕ್ಷನ್ ಜಾರಿ ಮಾಡಿದ್ದಾರೆ.

NO COMMENTS

LEAVE A REPLY