ನಾಳೆ ಮಾಜಿ ಪ್ರಧಾನಿ ಹೆಚ್,ಡಿ ದೇವೇಗೌಡರ ಸಾಧನೆ ಕುರಿತ ಪುಸ್ತಕ ಬಿಡುಗಡೆ: ಪ್ರೋ.ಕೆ.ಎಸ್ ರಂಗಪ್ಪ ಹೇಳಿಕೆ

ನಾಳೆ ಮಾಜಿ ಪ್ರಧಾನಿ ಹೆಚ್,ಡಿ ದೇವೇಗೌಡರ ಸಾಧನೆ ಕುರಿತ ಪುಸ್ತಕ ಬಿಡುಗಡೆ: ಪ್ರೋ.ಕೆ.ಎಸ್ ರಂಗಪ್ಪ ಹೇಳಿಕೆ

186
0
SHARE

ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ವಿಶ್ರಾಂತ ಕುಲಪತಿ ಪ್ರೋ ಕೆ ಎಸ್ ರಂಗಪ್ಪ, ನಾಳೆ ಸಂಜೆ 4:30 ಕ್ಕೆ ಮೈಸೂರು ವಿವಿಯ ಸೆನೆಟ್ ಭವನದಲ್ಲಿ ಪುಸ್ತಕ ಬಿಡುಗಡೆಯಾಗಲಿದ್ದು, ಆಧಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ನಿರ್ಮಾಲಾನಂದ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಪ್ರಧಾನ ಮಂತ್ರಿಯಾಗಿ ಹೆಚ್ ಡಿ ದೇವೇಗೌಡರು ಮಾಡಿದ ಸಾಧನೆ ಹಾಗೂ ರಾಜತಾಂತ್ರಿಕ ನೀತಿ ಕುರಿತ ಪುಸ್ತಕವಾಗಿದೆ. ಹತ್ತು ತಿಂಗಳ ಆಡಳಿತದಲ್ಲಿ ಅವರು ರೂಪಿಸಿದ ಯೋಜನೆ ಈಗಾ ಕಾರ್ಯರೂಪಕ್ಕೆ ಬರುತ್ತಿವೆ ಎಂದು ಹೇಳಿದರು.

ಇನ್ನು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರ 20 ತಿಂಗಳ ಸಾಧನೆ ಕುರಿತು ಪುಸ್ತಕ ಶೀಘ್ರವೇ ಬಿಡುಗಡೆಯಾಗಲಿದೆ ಎಂದು ಚಾಮರಾಜ ವಿಧಾನಸಭಾ ಕ್ಷೇತ್ರದ ಜೆ ಡಿಎಸ್ ಸಂಭವನಿಯ ಅಭ್ಯರ್ಥಿ ಪ್ರೋ ಕೆ ಎಸ್ ರಂಗಪ್ಪ ತಿಳಿಸಿದರು.

ಬಳಿಕ ಲೇಖಕ ಡಾ ಪ್ರಧಾನ ಗುರುದತ್ತ ಅವರು ಮಾತನಾಡಿ, ದೂರದೃಷ್ಟಿ ಇದ್ದ ಒಬ್ಬ ಅಪರೂಪದ ಆಡಳಿತಗಾರ ಹೆಚ್ ಡಿ ದೇವೇಗೌಡರು. ಹೀಗಾಗಿ ಈ ಪುಸ್ತಕ ರಚಿಸಲು 40 ರಿಂದ 50 ಭಾರಿ ಸಂದರ್ಶನ ಮಾಡಿದ್ದೇವೆ. ಅವರಿಗೆ ನೆನಪಿನ ಶಕ್ತಿ ಆಗಾದವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

NO COMMENTS

LEAVE A REPLY