ಸದಾಶಿವ ವರದಿ ಜಾರಿ ಮಾಡುವಲ್ಲಿ ವಿಳಂಬ: ರಾಹುಲ್ ಗಾಂಧಿಗೆ ಮುನ್ನಚ್ಚರಿಕೆ…

ಸದಾಶಿವ ವರದಿ ಜಾರಿ ಮಾಡುವಲ್ಲಿ ವಿಳಂಬ: ರಾಹುಲ್ ಗಾಂಧಿಗೆ ಮುನ್ನಚ್ಚರಿಕೆ…

182
0
SHARE

ರಾಯಚೂರು(ಫೆ.8.2018): ಎ.ಜೆ.ಸದಾಶಿವ ವರದಿ ಜಾರಿಗೆ ಮಾಡುವಲ್ಲಿ ಸರಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ. ಹೀಗಾಗಿ ಎಐಸಿಸಿ ಅಧ್ಯಕ್ಷ ರಾಜಕ್ಕೆ ರಾಹುಲ್ ಗಾಂಧಿ  ರಾಜ್ಯ ಪ್ರವಾಸದ ವೇಳೆ ಅವರಿಗೆ ಕಪ್ಪು ಭಾವುಟ ಪ್ರದರ್ಶನ ಮಾಡಲಾಗುವುದು ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಅಧ್ಯಕ್ಷ ಎಂ.ರಾಜು ಹೇಳಿದರು.

ಪತ್ರಿಕಾ ಭವನದಲ್ಲಿ  ಇಂದು ಸುದ್ದಿಗೊಷ್ಠಿ ನಡೆಸಿ ಮಾತನಾಡಿದ ಅವರು,  ಕಳೆದ ೨೦ ವರ್ಷಗಳಿಂದ ಹೋರಾಟ ಮಾಡುತ್ತಾ ಬಂದರೂ ಅನೇಕ ಸರಕಾರಗಳು ಆಶ್ವಾಸನೆ ನೀಡುತ್ತಾ ಬಂದಿವೆ. ಕಾಂಗ್ರೆಸ್ ಸರಕಾರ ವರದಿ ಜಾರಿಗೆ ಭರವಸೆ ಈಡೇರಿಸುದಾಗಿ ಹೇಳಿತ್ತು.  ಆದರೆ ಇದೀಗ ದಲಿತ ಜಾತಿಗಳನ್ನು ಹೊಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ರಾಜ್ಯಕ್ಕೆ ರಾಹುಲ್ ಗಾಂಧಿ ಆಗಮಿಸುತ್ತಿದ್ದು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ವರದಿ ಜಾರಿಗೆ ಮಾಡುವಂತೆ ಕಪ್ಪು ಭಾವುಟ ಪ್ರದರ್ಶನ ಮಾಡಲಾಗುವುದು ಎಂದು ತಿಳಿಸಿದರು.

NO COMMENTS

LEAVE A REPLY