ಮೈಸೂರಿನ ರಾಜಪಥ ಅಭಿವೃದ್ಧಿಯಲ್ಲಿ ಭಾರಿ ಅವ್ಯವಹಾರ: ಲೋಕಾಯುಕ್ತ ಅಧಿಕಾರಿಗಳ ಪರಿಶೀಲನೆ

ಮೈಸೂರಿನ ರಾಜಪಥ ಅಭಿವೃದ್ಧಿಯಲ್ಲಿ ಭಾರಿ ಅವ್ಯವಹಾರ: ಲೋಕಾಯುಕ್ತ ಅಧಿಕಾರಿಗಳ ಪರಿಶೀಲನೆ

253
0
SHARE

ಮೈಸೂರು(ಫೆ.8.2018):ಮೈಸೂರಿನ ರಾಜಪಥ ಮಾರ್ಗದ ಅಭಿವೃದ್ಧಿಯಲ್ಲಿ ಭಾರಿ ಅವ್ಯವಹಾರದ ದೂರು ಹಿನ್ನಲೆ ಲೋಕಾಯುಕ್ತ ಅಧಿಕಾರಿಗಳ ತಂಡ ಮೈಸೂರಿಗೆ ಆಗಮಿಸಿದ್ದು ಪರಿಶೀಲನೆ ನಡೆಸುತ್ತಿದೆ.

ಲೋಕಾಯುಕ್ತ ಕಾರ್ಯಪಾಲಕ ಇಂಜಿನಿಯರ್ ಹಾಗೂ ತನಿಖಾಧಿಕಾರಿ ಹೆಚ್ ಎಂ ಜಯಕುಮಾರ್ ತಂಡ ಮೈಸೂರಿಗೆ ಆಗಮಿಸಿದ್ದು, ರಾಜಪಥ ಮಾರ್ಗವನ್ನ ಎರಡು ದಿನಗಳ ಕಾಲ ಪರಿಶೀಲನೆ ನಡೆಸಲಿದ್ದಾರೆ.  ಲೋಕಾಯುಕ್ತ ಕಾರ್ಯಪಾಲಕ ಇಂಜಿನಿಯರ್ ಹೆಚ್ ಎಂ ಜಯಕುಮಾರ್, ಎಸ್ ಇ  ಭಾಸ್ಕರ್  ರಾಘವೇಂದ್ರ ಡಿ ಒ ರುದ್ರೇಶ್ , ಪಾಲಿಕೆ ಅಧಿಕಾರಿಗಳು ಆಗಮಿಸಿದ್ದಾರೆ.

ಅವ್ಯವಹಾರ ಕುರಿತು ನಂದೀಶ್ ಪ್ರೀತಮ್ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ದೂರಿನ ಮೇರೆಗೆ  ಲೋಕಾಯುಕ್ತ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಮೈಸೂರು ನಗರ ಅಭಿವೃದ್ಧಿಗೆ ವಿಶೇಷ ನೂರು ಕೋಟಿ ಅನುದಾನ ನೀಡಲಾಗಿತ್ತು. ಅದರಲ್ಲಿ ೧೮ ಕೋಟಿ ರೂಗಳನ್ನ ರಾಜಪಥ ಕಾಮಗಾರಿಗೆಂದು ಬಳಸಲಾಗಿತ್ತು. ಈ ಅನುದಾನದಲ್ಲಿ ಅಂದಿನ ಜಿಲ್ಲಾಧಿಕಾರಿ ಹರ್ಷಗುಪ್ತ ಸೇರಿದಂತೆ ಇತರೆ ಅಧಿಕಾರಿಗಳು ಅವ್ಯವಹಾರ ನಡೆಸಿದ್ದಾರೆಂದು ೨೦೧೫ ರಲ್ಲಿ ಲೋಕಾಯುಕ್ತಗೆ ನಂದೀಶ್ ಪ್ರೀತಮ್ ದೂರು ನೀಡಿದ್ದರು.

ರಾಜಪಥದ ಕಲ್ಲಿನ ಬ್ಯಾರಿಕೇಡ್ ಗಳಿಗೆ ಮಾರುಕಟ್ಟೆ ದರಗಿಂತ ಹೆಚ್ಚು ಅನುದಾನ ನೀಡಿ , ಟೆಂಡರ್ ದಾರರೊಂದಿಗೆ ಶಾಮೀಲಾಗಿದ್ದು, ಅವ್ಯವಹಾರ ನಡೆಸಿದ್ದಾರೆಂದು ಪ್ರೀತಮ್ ದೂರಿನಲ್ಲಿ ಉಲ್ಲೇಖಸಿದ್ದರು.

NO COMMENTS

LEAVE A REPLY