ರಮ್ಯಾ ಒಬ್ಬಳು ವಯ್ಯಾರಿ ನಟಿ:ಮಾಜಿ ಸಚಿವ ಸೊಗಡು ಶಿವಣ್ಣ..

ರಮ್ಯಾ ಒಬ್ಬಳು ವಯ್ಯಾರಿ ನಟಿ:ಮಾಜಿ ಸಚಿವ ಸೊಗಡು ಶಿವಣ್ಣ..

295
0
SHARE

ತುಮಕೂರು(ಫೆ.08.2018):ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಟೀಕೆ ಮಾಡಿದ್ದ ನಟಿ  ರಮ್ಯಾ ವಿರುದ್ದ ಮಾಜಿ ಸಚಿವ ಸೊಗಡು ಶಿವಣ್ಣ ಹರಿಹಾಯ್ದಿದ್ದಾರೆ. ರಮ್ಯಾ ಒಬ್ಬಳು ವಯ್ಯಾರಿ,ನಟಿ.  ಆಕೆಗೆ ನಟನೆ ಮಾಡೋದಷ್ಟೆ ಗೊತ್ತು. ಅವಳ ಹೇಳಿಕೆಗೆ ಮಹತ್ವ ಕೊಡಬಾರದು ಎಂದು ಮಾಜಿ ಸಚಿವ ಸೊಗಡು ಶಿವಣ್ಣ ವ್ಯಂಗ್ಯವಾಡಿದ್ದಾರೆ.

ತುಮಕೂರಿನಲ್ಲಿ  ಇಂದು ಮಾತನಾಡಿದ   ಸೊಗಡು ಶಿವಣ್ಣ, ರಮ್ಯಾಗೆ ನಟನೆ ಮಾಡೋದಷ್ಟೇ ಗೊತ್ತು. ಸಮಾಜ, ಪ್ರಜಾಪ್ರಭುತ್ವ ಅಂದರೆ ಏನೂ ಅನ್ನೋದು ಆಕೆಗೆ ಗೊತ್ತಿಲ್ಲಾ. ದೇಶಕ್ಕೆ ಅಯ್ಯಮ್ಮನ ಕೊಡುಗೆಯಾದ್ರೂ ಏನು? ಅವಳ ಹೇಳಿಕೆಗೆ ಮಹತ್ವ ಕೊಟ್ರೆ ದೇಶದ 120 ಕೋಟಿ ಜನರಿಗೆ ಅವಮಾನ ಮಾಡಿದಂತೆ.ಎಂದು ಏಕ ವಚನದಲ್ಲಿಯೇ ಟಾಂಗ್ ನೀಡಿದರು.

ಬೆಂಗಳೂರಿನಲ್ಲಿ ಸಾಮಾಜಿಕ ಜಾಲತಾಣ ನಿರ್ವಹಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಕಾರ್ಯಕರ್ತರಿಗೆ ಪಾಠ ಮಾಡುವ ವೇಳೆ ಫೇಕ್ ಖಾತೆ ಓಪನ್ ಮಾಡಿದ್ದರೆ ಯಾವುದೇ ತಪ್ಪಿಲ್ಲ ಎಂದು ಹೇಳಿದ್ದರು.

NO COMMENTS

LEAVE A REPLY