ಮೈಸೂರು ವಿವಿ ಪಿಎಚ್ ಡಿ ಪದವಿ ಪರೀಕ್ಷೆಯಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ರಿಯಾಯಿತಿ ಪ್ರಸ್ತಾವನೆ...

ಮೈಸೂರು ವಿವಿ ಪಿಎಚ್ ಡಿ ಪದವಿ ಪರೀಕ್ಷೆಯಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ರಿಯಾಯಿತಿ ಪ್ರಸ್ತಾವನೆ ಸಲ್ಲಿಸಲು ನಿರ್ಧಾರ…

295
0
SHARE

ಮೈಸೂರು(ಫೆ.7.2018):ಮೈಸೂರು ವಿವಿ.  ಪಿಎಚ್‌ ಡಿ ಪದವಿಯ  ಪ್ರವೇಶ ಪರೀಕ್ಷೆಯಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ರಿಯಾಯಿತಿ ನೀಡುವ ಕುರಿತು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಮೈಸೂರು ವಿವಿ ಶೈಕ್ಷಣಿಕ ಸಭೆಯಲ್ಲಿ ನಿರ್ಧರ ಕೈಗೊಳ್ಳಲಾಯಿತು.

ಮೈಸೂರು ವಿವಿ ಕ್ರಾಫರ್ಡ್ ಭವನದ ಶಿಕ್ಷಣ ಮಂಡಳಿ ಸಭಾಂಗಣದಲ್ಲಿ ಬುಧವಾರ ವಿವಿಯ ಪ್ರಭಾರ ಕುಲಪತಿ ಪ್ರೊ.ಸಿ.ಬಸವರಾಜು ಅಧ್ಯಕ್ಷತೆಯಲ್ಲಿ ನಡೆದ ವಿವಿ ಶಿಕ್ಷಣ ಮಂಡಳಿಯ ಮೂರನೇ ಸಾಮಾನ್ಯ ಸಭೆಯಲ್ಲಿ 2017ರ ಪಿಎಚ್‌ಡಿ ನಿಯಮಾವಳಿಯ ತಿದ್ದುಪಡಿ ವಿಚಾರವನ್ನು ಮಂಡಿಸಲಾಯಿತು.

ಪರೀಕ್ಷಾಂಗ ಕುಲಸಚಿವ ಪ್ರೊ.ಜೆ.ಸೋಮಶೇಖರ್ ಅವರು  ನಿಯಮಾವಳಿಗೆ ತಿದ್ದುಪಡಿ ಮಾಡಿರುವುದರ ಕುರಿತಂತೆ ವಿವರಣೆ ನೀಡಿದರು. ಈ ವೇಳೆ ಸದಸ್ಯರೊಬ್ಬರು ಮಾತನಾಡಿ, ಪಿಎಚ್‌ಡಿ ಪ್ರವೇಶ ಪರೀಕ್ಷೆಯಲ್ಲಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ರಿಯಾಯಿತಿ ಕೊಡುವಲ್ಲಿ ಅನ್ಯಾಯವಾಗಿದೆ. ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೂ ಪಿಎಚ್‌ಡಿ ಪ್ರವೇಶ ಪರೀಕ್ಷೆಯಲ್ಲಿ ಪಾಸ್ ಅಂಕವನ್ನು 50 ಅಂಕ ನಿಗದಿ ಮಾಡಬೇಕು. ಆ ಮೂಲಕ ತಾರತಮ್ಯ ಸರಿಪಡಿಸಬೇಕು ಎಂದರು.

 

ಇದಕ್ಕೆ ಪ್ರತಿಕ್ರಿಯೆ ನೀಡಿದ ಪ್ರೊ.ಸಿ.ಬಸವರಾಜು ಸರ್ಕಾರದ ಆದೇಶದ ಪ್ರಕಾರ ಸಾಮಾನ್ಯ ವರ್ಗದ ವಿದ್ಯಾರ್ಥಿಗಳು 55 ಅಂಕ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಕೆಟಗರಿ-ಒಂದು ವರ್ಗದವರಿಗೆ 50 ಅಂಕಗಳನ್ನು ನಿಗದಿಪಡಿಸಲಾಗಿದೆ. ಪಿಎಚ್‌ಡಿ ನಿಯಮಾವಳಿಗೆ ಸರ್ಕಾರವೇ ಒಪ್ಪಿಗೆ ನೀಡಿದೆ ಎಂದು ವರಿಸಿದರು. ಆದರೆ, ಇದನ್ನು ಶೈಕ್ಷಣಿಕ ಕೌನ್ಸಿಲ್ ಸದಸ್ಯರು ರಘುರವರು ಯುಜಿಸಿಯಲ್ಲಿ ಓಬಿಸಿ ವರ್ಗದವರಿಗೂ ಅವಕಾಶ ಕೊಟ್ಟಿರುವಂತೆ ಇಲ್ಲಿಯೂ ಕೊಡಬೇಕು. ನಿಯಮಾವಳಿಗೆ ತಿದ್ದುಪಡಿ ತರಬೇಕು ಎಂದು ಆಗ್ರಸಿದರು.

 

ಇದಕ್ಕೆ ಪೂರಕವಾಗಿ ಮಾತನಾಡಿದ ಪ್ರೊ.ಬಿ.ಪಿ.ಮಹೇಶ್‌ಚಂದ್ರಗುರು, ಸಾಮಾಜಿಕ ನ್ಯಾಯದಡಿ ಹಿಂದುಳಿದ ವರ್ಗದವರಿಗೂ ಅವಕಾಶ ಸಿಗಲಿ. ಎಸ್‌ಸಿ-ಎಸ್ಟಿಗೆ 45 ಅಂಕ, ಓಬಿಸಿಗೆ 50ಅಂಕಗಳನ್ನು ನಿಗದಿಪಡಿಸಿದರೆ ಎಲ್ಲರಿಗೂ ಅವಕಾಶ ಸಿಗಲಿದೆ ಎನ್ನುವ ಸಲಹೆ ನೀಡಿದರು. ಇದರ ನಡುವೆ ಮತ್ತೊಬ್ಬ ಸದಸ್ಯರು ಮಾತನಾಡಿ, ಪಿಎಚ್‌ಡಿ ಮಾಡಲು ಕೆಲವರಿಗೆ ಅವಕಾಶಲ್ಲದೇ ಗೈಡ್‌ಗಳಿಗೆ ಕೊರತೆಯಾಗಿದೆ. ಹಾಗಾಗಿ,ಇದನ್ನು ಬದಲಿಸಿ ರಿಯಾಯಿತಿ ಕೊಟ್ಟರೆ ಉತ್ತಮ ಎಂದರು.

ಈ ಎಲ್ಲಾ ಚರ್ಚೆಗಳ ನಡುವೆ ಸರ್ಕಾರಕ್ಕೆ ಪತ್ರ ಬರೆಯುವುದು ಉತ್ತಮ. ಸಮಾಜ ಕಲ್ಯಾಣ ಇಲಾಖೆಯು ಯಾವ್ಯಾವ ವರ್ಗಗಳಿಗೆ ರಿಯಾಯಿತಿ ಕೊಡಬೇಕು ಎಂಬುದನ್ನು ಹೇಳಿದಂತೆ ಅದರಂತೆ ಮಾಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.

ಬಳಿಕ ಮಾತನಾಡಿದ ಕುಲಪತಿಗಳು ಪಿಎಚ್‌ಡಿ ನಿಯಮಾವಳಿ ತಿದ್ದುಪಡಿ ಮಾಡಲು ಹಾಗೂ ಓಬಿಸಿ ವರ್ಗದ ವಿದ್ಯಾರ್ಥಿಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ರಿಯಾಯಿತಿ ಕೊಡುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಬಗ್ಗೆ ಪತ್ರ ಬರೆಯಲಾಗುವುದು ಎಂದು ಚರ್ಚೆಗೆ ತೆರೆ ಎಳೆದರು.

NO COMMENTS

LEAVE A REPLY