ಸರ್ಕಾರದ ವಶಕ್ಕೆ ಮಠಗಳು: ಸಿದ್ಧಗಂಗಾ ಶ್ರೀಗಳ ವಿರೋಧ ವ್ಯಕ್ತ..

ಸರ್ಕಾರದ ವಶಕ್ಕೆ ಮಠಗಳು: ಸಿದ್ಧಗಂಗಾ ಶ್ರೀಗಳ ವಿರೋಧ ವ್ಯಕ್ತ..

242
0
SHARE

ತುಮಕೂರು(ಫೆ.07.2018): ಮಠ ಮಾನ್ಯಗಳನ್ನು ಧಾರ್ಮಿಕ ದತ್ತಿ ಕಾಯಿದೆಗೆ ಒಳಪಡಿಸುವ ಸರಕಾರದ ಚಿಂತನೆಗೆ ಸಿದ್ದಗಂಗಾ ಕಿರಿಯ ಶ್ರೀಗಳು ವಿರೋಧ ವ್ಯಕ್ತಪಡಿಸಿದ್ದಾರೆ.

ಮಾಧ್ಯಮ ಹೇಳಿಕೆ ನೀಡಿರುವ ಕಿರಿಯ ಶ್ರೀಗಳಾದ ಸಿದ್ದಲಿಂಗ ಸ್ವಾಮಿಜಿ, ‘ಮಠಗಳಿಗೆ ತನ್ನದೇ ಆದ ಅಸ್ತಿತ್ವವಿದೆ ಹಾಗೂ ಆಚಾರ-ವಿಚಾರಗಳಿರುವುದರಿಂದ ಮಠ ಮಾನ್ಯಗಳನ್ನು ಧಾರ್ಮಿಕ ದತ್ತಿ ಕಾಯಿದೆಗೆ ಒಳ ಪಡಿಸಲು ಸಾಧ್ಯವಿಲ್ಲ,’ ಎಂದು ಹೇಳಿದ್ದಾರೆ.

‘ಮಠಗಳಿಗೆ ತನ್ನದೆ ಆದ ಸ್ವಾತಂತ್ರ್ಯ ಇದೆ. ರಾಜ್ಯದ ಎಲ್ಲ ಮಠದ ಸ್ವಾಮಿಗಳು ಈ ಕುರಿತು ಚರ್ಚಿಸುತ್ತೇವೆ. ಈ ಹಿಂದೆಯೂ ಈ ಕಾಯಿದೆಗೆ ವಿರೋಧ ವ್ಯಕ್ತವಾಗಿತ್ತು. ಮತ್ತೆ ಮಠಗಳನ್ನು ಧಾರ್ಮಿಕ ದತ್ತಿ ಕಾಯಿದೆಗೆ ತರುವುದು ಉಚಿತವಲ್ಲ. ಈ ಕುರಿತು ಸರ್ಕಾರಕ್ಕೆ ಸಲಹೆ ನೀಡುತ್ತೇವೆ,’ ಎಂದಿದ್ದಾರೆ.

NO COMMENTS

LEAVE A REPLY