ರಾಷ್ಟ್ರಪತಿಯವರಿಂದ ಮಹಾಮಸ್ತಕಾಭಿಷೇಕ ಸಮಾರಂಭಕ್ಕೆ ಚಾಲನೆ..

ರಾಷ್ಟ್ರಪತಿಯವರಿಂದ ಮಹಾಮಸ್ತಕಾಭಿಷೇಕ ಸಮಾರಂಭಕ್ಕೆ ಚಾಲನೆ..

301
0
SHARE

ಹಾಸನ(ಫೆ.7.2018):ಮಹಾಮಸ್ತಕಾಭಿಷೇಕ ಅಭಿವೃದ್ಧಿ ಕಾಮಗಾರಿ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನಿರ್ಜೀವ ಕಲ್ಲಿನಲ್ಲಿ ಬಾಹುಬಲಿಯ ತತ್ವಗಳು ಜೀವತುಂಬಿವೆ ಎಂದು ಬಣ್ಣಿಸಿದರು.

ಹಾಸನ ಜಿಲ್ಲೆ ಶ್ರವಣಬೆಳಗೊಳದಲ್ಲಿ 12 ವರ್ಷಗಳಿಗೊಮ್ಮೆ ನಡೆಯುವ ಮಹಮಸ್ತಕಾಭಿಷೇಕ ಇಂದಿನಿಂದ ಆರಂಭವಾಗಿದ್ದು, ಮಹಮಸ್ತಕಾಭಿಷೇಕ ಸಮಾರಂಭಕ್ಕೆ ರಾಷ್ಟ್ರಪತಿ  ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ರಾಷ್ಟ್ರಪತಿ ಆದ ಮೇಲೆ ರಾಜ್ಯಕ್ಕೆ ಇದು ನನ್ನ ಭೇಟಿಯಾಗಿದೆ. ಅಹಿಂಸಾ ಪರಂಪರೆಯ ಭಾಗವಾಗಿರುವುದು ನನಗೆ ಸಂತೋಷವಾಗಿದೆ.ಬಾಹುಬಲಿಯ ತತ್ವ ನಮಗೆ ಮಾದರಿ ನಿರ್ಜೀವ ಕಲ್ಲಿನಲ್ಲಿ ಬಾಹುಬಲಿಯ ತತ್ವಗಳು ಜೀವತುಂಬಿವೆ ಎಂದರು.

ಇಡೀ ವಿಶ್ವ ಕ್ಕೆ ಜೈನತತ್ವಗಳು ಪೂರಕವಾಗಿದ್ದು, ಇವುಗಳನ್ನು ಅನುಸರಿಸಿದರೆ ವಿಶ್ವದ ಕಲ್ಯಾಣವಾಗಲಿದ. ಬಾಹುಬಲಿಯ ಮುಖದಲ್ಲಿ ಆತಂಕದ ಭಾವನೆ ಸರಿದೂಗಿಸುವ ನಗುವಿದೆ. ಮಸ್ತಕಾಭಿಷೇಕಕ್ಕೆ ಸಂತಸದಿಂದ ಶುಭಕೋರುತ್ತೇನೆ ಎಂದು ರಾಷ್ಟ್ರಪತಿ ಕೋವಿಂದ್ ಹೇಳಿದರು.

NO COMMENTS

LEAVE A REPLY