ತೈವಾನ್ ಭೂಕಂಪ:ಇಬ್ಬರು ಬಲಿ 200 ಕ್ಕೂ ಹೆಚ್ಚು ಮಂದಿಗೆ ಗಾಯ..

ತೈವಾನ್ ಭೂಕಂಪ:ಇಬ್ಬರು ಬಲಿ 200 ಕ್ಕೂ ಹೆಚ್ಚು ಮಂದಿಗೆ ಗಾಯ..

251
0
SHARE

ತೈಪೆ(ಫೆ. 07.2018): ತೈವಾನಿನಲ್ಲಿ ಸಂಭವಿಸಿದ 6.4 ತೀವ್ರತೆಯ ಭಾರೀ ಭೂಕಂಪಕ್ಕೆ ಇಬ್ಬರು ಮೃತರಾಗಿದ್ದು, 200ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

ಇಲ್ಲಿನ ಒಂದು ಬೃಹತ್ ಹೊಟೆಲ್ ಮತ್ತು ಅಪಾರ್ಟ್ಮೆಂಟ್ ಧರೆಗುರುಳಿದ ಪರಿಣಾಮ ಹಲವರು ಕಟ್ಟಡದ ಅವಶೇಷದೊಳಗೆ ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಈಗಾಗಲೇ ರಕ್ಷಣಾ ಖಾರ್ಯ ಆರಂಭವಾಗಿದ್ದು, ಹಲವರನ್ನು ರಕ್ಷಿಸಲಾಗಿದೆ.

ಕಳೆದ ಹತ್ತು  ವರ್ಷದ ನಂತರ ತೈವಾನಿನಲ್ಲಿ ಸಂಭವಿಸಿದ ಅತ್ಯಂತ ಭೀಕರ ಭೂಕಂಪ ಇದು ಎಂಬುದು ಸ್ಥಳೀಯರ ಅಭಿಪ್ರಾಯ. ಕುಸಿದ ಕಟ್ಟಡದಿಂದ 150 ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದ್ದು, ಮತ್ತಷ್ಟು ಜನ ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ನಿನ್ನೆ(ಫೆ.6) ರಾತ್ರಿ 11:50 ಕ್ಕೆ ಭೂಕಂಪ ಸಂಭವಿಸಿದೆ.

1999ರಲ್ಲಿ ತೈವಾನಿನಲ್ಲಿ ಸಂಭವಿಸಿದ ಭೂಕಂಪ ಇದುವರೆಗಿನ ಕರಾಳ ಭೂಕಂಪ ಎನ್ನಿಸಿದ್ದು, ರಿಕ್ಟರ್ ಮಾಪನದಲ್ಲಿ 7.6 ತೀವ್ರತೆ ದಾಖಲಾಗಿತ್ತು. ಆ ಸಂದರ್ಭದಲ್ಲಿ 2,400 ಜನ ಸಾವಿಗೀಡಾಗಿದ್ದರು.

NO COMMENTS

LEAVE A REPLY