ಡಿಜಿಲಾಕರ್​ಗೆ ಮಾನ್ಯತೆ ಕಲ್ಪಿಸಿದ ಸಾರಿಗೆ ಇಲಾಖೆ..

ಡಿಜಿಲಾಕರ್​ಗೆ ಮಾನ್ಯತೆ ಕಲ್ಪಿಸಿದ ಸಾರಿಗೆ ಇಲಾಖೆ..

184
0
SHARE

ಬೆಂಗಳೂರು(ಫೆ.06.2018): ರಾಜ್ಯ ಸಾರಿಗೆ ಇಲಾಖೆಯು ಡಿಜಿಲಾಕ’ರ್ ಮಾನ್ಯತೆ ನೀಡಲಾಗಿದ್ದು, ಇನ್ಮುಂದೆ ವಾಹನ ಸವಾರರು ಮೊಬೈಲ್‌ನಲ್ಲೇ ವಾಹನ ಚಾಲನಾ ಪರವಾನಗಿ, ಆರ್‌ಸಿ ಪತ್ರ ತೋರಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಸಾರಿಗೆ ಇಲಾಖೆ ಆಯುಕ್ತ ಬಿ ದಯಾನಂದ್‌ ತಿಳಿಸಿದ್ದಾರೆ.

ಡಿಜಿಲಾಕರ್‌ನಲ್ಲಿ ಅಡಕವಾದ ಪ್ರಮಾಣ ಪತ್ರಗಳನ್ನು ಮೂಲ ದಾಖಲೆಗಳಿಗೆ ಸಮಾನವಾಗಿ ಅಂಗೀಕರಿಸಲು ರಾಜ್ಯ ಸಾರಿಗೆ ಇಲಾಖೆಯಿಂದ ಅಧಿಸೂಚನೆ ಹೊರಡಿಸಲಾಗಿದೆ. ಮೊಬೈಲ್‌ನಲ್ಲೇ ವಾಯುಮಾಲಿನ್ಯ ತಪಾಸಣೆ ಪ್ರಮಾಣ ಪತ್ರವನ್ನೂ ತೋರಿಸಬಹುದು ಎಂದು ತಿಳಿಸಿದ್ದಾರೆ.

ಈ ಕುರಿತು ಬೆಂಗಳೂರು ಟ್ರಾಫಿಕ್‌ ಪೊಲೀಸ್‌, ಪೊಲೀಸ್‌ ಮಹಾನಿರ್ದೇಶಕರು ಮತ್ತು ಪೊಲೀಸ್‌ ಆಯುಕ್ತರಿಗೂ ಮಾಹಿತಿಯನ್ನು ರವಾನಿಸಲಾಗಿದೆ.
ಸಾರಿಗೆ ಸಹಾಯವಾಣಿ ಸಾರಿಗೆ ಇಲಾಖೆಯಿಂದ ನೂತನ ಸಹಾಯವಾಣಿ ಪ್ರಾರಂಭಿಸಲಾಗುತ್ತಿದ್ದು, ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಸಹಾಯವಾಣಿ ಇರಲಿದೆ. ಸಾರ್ವಜನಿಕರು ಇಲಾಖೆಗೆ ಸಂಬಂಧಿಸಿದ ದೂರು ಮತ್ತು ಸಲಹೆಗಳನ್ನು ಸಹಾಯವಾಣಿ ಮೂಲಕ ನೀಡಬಹುದು. ಇದಲ್ಲದೆ, ಟ್ವಿಟರ್‌, ಫೇಸ್‌ಬುಕ್‌ ಮತ್ತು ವಾಟ್ಸ್ಆ್ಯಪ್ನಲ್ಲೂ ದೂರು, ಸಲಹೆ ನೀಡಬಹುದು. 

NO COMMENTS

LEAVE A REPLY