ಮುಕ್ತ ವಿ.ವಿ ಅಂಕಪಟ್ಟಿಗೆ ಮಾನ್ಯತೆ ನೀಡುವಂತೆ ಹೈಕೋರ್ಟ್ ಆದೇಶ

ಮುಕ್ತ ವಿ.ವಿ ಅಂಕಪಟ್ಟಿಗೆ ಮಾನ್ಯತೆ ನೀಡುವಂತೆ ಹೈಕೋರ್ಟ್ ಆದೇಶ

503
0
SHARE

ಮೈಸೂರು(ಫೆ.05, 2018 ):ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳ ಅಂಕಪಟ್ಟಿಗೆ ಕಡೆಗೂ ಮಾನ್ಯತೆ ಲಭಿಸಿದೆ. ಮಾರ್ಕ್ಸ್ ಕಾರ್ಡ್ ಮಾನ್ಯ ಮಾಡುವಂತೆ ಹೈಕೋರ್ಟ್ ಆದೇಶಿಸಿದೆ. ಆಮೂಲಕ ರಾಜ್ಯ ಸರ್ಕಾರ  ಮುಕ್ತ ವಿವಿ ವಿದ್ಯಾರ್ಥಿಗಳಿಗೆ ಬಂಪರ್ ಕೊಡುಗೆ ನೀಡಿದೆ.

ಕರ್ನಾಟಕ ರಾಜ್ಯ ಮುಕ್ತ ವಿವಿಯ 2014-15 , 2015-16 ನೇ ಸಾಲಿನ ಪದವಿ ಪ್ರಮಾಣ ಪತ್ರ ಹೊಂದಿದ ವಿದ್ಯಾರ್ಥಿಗಳು ಈ ಆದೇಶದಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟಂತಾಗಿದೆ.  ಪರಿಣಾಮ 95 ಸಾವಿರ ವಿದ್ಯಾರ್ಥಿಗಳ ಬಾಳಲ್ಲಿ ಆಶಾಕಿರಣ ಮೂಡಿದೆ.

ರಾಜ್ಯ ಸರ್ಕಾರದಿಂದ ಅಧಿಕೃತ ಮಾನ್ಯತೆ . ಹೈಕೋರ್ಟ್ ಸೂಚನೆ ಮೇರೆಗೆ ಮಾನ್ಯತೆ. ಕಳೆದ ಮೂರು ವರ್ಷದಿಂದ ಮಾನ್ಯತೆ ನೀಡಲು ಮೀನಾಮೇಷ ಎಣಿಸುತ್ತಿದ್ದ ಯುಜಿಸಿ, ಕೆ.ರತ್ನಪ್ರಭಾ ಸಮಿತಿ ವರದಿ ಜಾರಿಗೆ ರಾಜ್ಯ ಸರ್ಕಾರ ಮನವಿ ಮಾಡಿತ್ತು. ಹೆಚ್ಚುವರಿ ಅಡ್ವೋಕೇಟ್ ಜನರಲ್ ಎ.ಎಸ್.ಪೊನ್ನಣ್ಣರಿಂದ ಸಲ್ಲಿಕೆಯಾಗಿತ್ತು.

ನ್ಯಾ.ಎ.ಎಸ್.ಬೋಪಣ್ ಅವರ ಏಕಸದಸ್ಯ ನ್ಯಾಯಪೀಠಕ್ಕೆ ಸಲ್ಲಿಕೆ.  ವೃತ್ತಿ ಭವಿಷ್ಯಕ್ಕೆ ಅನುಕೂಲ ಮಾಡಿಕೊಡುವಂತೆ ವರದಿಯಲ್ಲಿ ಮನವಿ ಮಾಡಿದರು. ಸರ್ಕಾರದಿಂದಲೇ ಮಾನ್ಯತೆ ನೀಡಬೇಕೆಂಬ ಶಿಫಾರಸ್ಸು ಜಾರಿ ಮಾಡಿದ ಹೈಕೋರ್ಟ್. ಬಿಎ, ಬಿಕಾಂ, ಎಂಎ . ಎಂಕಾಂ ಕೋರ್ಸ್ ಮಾತ್ರ ಈ ಆದೇಶ ಜಾರಿಯಾಗಿದೆ.

NO COMMENTS

LEAVE A REPLY