ಮೈಸೂರು ಮೇಯರ್ ಭಾಗ್ಯವತಿ ವಿರುದ್ದ ಪ್ರತಿಭಟನೆ..

ಮೈಸೂರು ಮೇಯರ್ ಭಾಗ್ಯವತಿ ವಿರುದ್ದ ಪ್ರತಿಭಟನೆ..

232
0
SHARE

ಮೈಸೂರು(ಫೆ.4.2018): ಭಾಗ್ಯವತಿ ಕಾಂಗ್ರೆಸ್ ಪಕ್ಷಕ್ಕೆ ಹಾಗೂ 23  ನೇ ವಾರ್ಡ್ ನ ಜನತೆಗೆ ಮೋಸ ಮಾಡಿದ್ದಾರೆ. ಹೀಗಾಗಿ ಕೂಡಲೇ ಮೇಯರ್ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ 23 ‌ನೇ‌ ವಾರ್ಡ್ ನ ನಿವಾಸಿಗಳು ಹಾಗೂ ಗಂಗೋತ್ರಿ ಲೇಔಟ್ ನಾಗರೀಕ ಹಿತರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಗರದ 23 ನೇ‌ ವಾರ್ಡ್ ನ ಕಣ್ಣನ್ ಬೇಕರಿ ಹತ್ತಿರ ಧರಣಿ ನಡೆಸುತ್ತಿದ್ದು, ಭಾಗ್ಯವತಿ ಕಾಂಗ್ರೆಸ ಪಕ್ಷಕ್ಕೆ ಹಾಗೂ 23  ನೇ ವಾರ್ಡ್ ನ ಜನತೆಗೆ ಮೋಸ ಮಾಡಿದ್ದಾರೆ. 23 ನೇ ‌ವಾರ್ಡ್ ಗೆ ಬಂದು ಮೋಸ‌ ಮಾಡಿದಕ್ಕೆ‌ ಸೂಕ್ತ‌ ಕಾರಣ‌ ನೀಡಬೇಕು. ‌ಸೂಕ್ತ‌ ಕಾರಣ ನೀಡದಿದ್ದರೆ ಮುಂದಾದುವ ಎಲ್ಲಾ ಅನಾಹುತಗಳಿಗೂ ಅವರೆ‌ ಕಾರಣರಾಗುತ್ತಾರೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.

NO COMMENTS

LEAVE A REPLY