ಗಂಗೋತ್ರಿಯಲ್ಲಿ ವಿದೇಶಿ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಲರವ

ಗಂಗೋತ್ರಿಯಲ್ಲಿ ವಿದೇಶಿ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಲರವ

470
0
SHARE

ಮೈಸೂರು (ಜ.03.2018):ಮೈಸೂರು ವಿವಿ ಮಾನಸ ಗಂಗೋತ್ರಿಯಲ್ಲಿ ಆಯೋಜಿಸಲಾಗಿದ್ದ ಅಂತರ ಕಾಲೇಜು ಸಾಂಸ್ಕೃತಿಕ ಸಂಜೆಯಲ್ಲಿ ವಿದೇಶಿ ವಿದ್ಯಾರ್ಥಿಗಳು ತಮ್ಮ ಸಂಸ್ಕೃತಿ ಮೆರೆದದ್ದು ಎಲ್ಲರ ಗಮನಸೆಳೆಯಿತು.

ಭಾರತವನ್ನು ಒಳಗೊಂಡಂತೆ ಸುಮಾರು 17 ದೇಶಗಳ ವಿದ್ಯಾರ್ಥಿಗಳು ತಮ್ಮ ತಮ್ಮ ದೇಶದ ಬಾವುಟವನ್ನು ಹಿಡಿದು ಪ್ರದರ್ಶನ ಮಾಡುವ ಮೂಲಕ ದೇಶದ ಭಾವೈಕ್ಯತೆಯನ್ನು ಸಾರಿದರು.

ತಮ್ಮದೇ ದೇಶದ ಸಂಸ್ಕೃತಿ ಸಾರುವ ಉಡುಗೆ ತೊಟ್ಟು ವಿಭಿನ್ನವಾದ ನೃತ್ಯ ಮಾಡುವ ಮೂಲಕ ತಮ್ಮ ಸುಸಂಸ್ಕೃತಿಯನ್ನು ಬಿಂಬಿಸಿದರು.

ಅಫ್ಘಾನಿಸ್ತಾನ,ನಮಿಬಿಯಾ,ಸೂಡಾನ್, ಉಗಾಂಡಾ, ಕೀನ್ಯಾ,ಭಾರತ ಮುಂತಾದ ದೇಶದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾನಸ ಗಂಗೋತ್ರಿಯ ವಿದ್ಯಾರ್ಥಿಗಳನ್ನು ರಂಜಿಸಿದರು.

ಕಾರ್ಯಕ್ರಮದಲ್ಲಿ ಮೈಸೂರು ವಿವಿ ಕುಲಪತಿಗಳಾದ ಡಾ.ಸಿ ಬಸವರಾಜು ಹಾಗೂ ಕಾರ್ಯಕ್ರಮದ ಆಯೋಜಕರು  ಉಪಸ್ಥಿತರಿದ್ದರು.
‌‌‌ ‌                                -ಚಂದ್ರಶೇಖರ್ ಬಿ.ಎನ್

NO COMMENTS

LEAVE A REPLY