ಫೆ. 4ಕ್ಕೆ ಬೆಂಗಳೂರು ಬಂದ್ ಮಾಡುವಂತಿಲ್ಲ: ಹೈಕೋರ್ಟ್

ಫೆ. 4ಕ್ಕೆ ಬೆಂಗಳೂರು ಬಂದ್ ಮಾಡುವಂತಿಲ್ಲ: ಹೈಕೋರ್ಟ್

198
0
SHARE

ಬೆಂಗಳೂರು (ಫೆ.03.2018): ಫೆ. 4ಕ್ಕೆ ಬೆಂಗಳೂರು ಬಂದ್ ಮಾಡುವಂತಿಲ್ಲ. ಬಂದ್ ಆಚರಣೆಗೆ ಕರೆ ನೀಡುವುದು ಸಂವಿಧಾನ ಬಾಹಿರ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.  

ಬಂದ್’ಗೆ  ಕರೆ ನೀಡಿದವರ ವಿರುದ್ಧ ಕ್ರಮಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.  ಬಂದ್ ವಿಚಾರವಾಗಿ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿರುವ ಹೈಕೋರ್ಟ್ ವಿಭಾಗೀಯ ಪೀಠ ಸಾರಿಗೆ, ವ್ಯಾಪಾರ ಎಂದಿನಂತೆ ನಡೆಯಲು ನೋಡಿಕೊಳ್ಳುವ ಹೊಣೆ ಸರ್ಕಾರದ ಜವಾಬ್ದಾರಿ ಎಂದು ಅಭಿಪ್ರಾಯಪಟ್ಟಿದೆ.

ಮಹದಾಯಿ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಮೂರು ದಿನಗಳೊಳಗಾಗಿ ಮಧ್ಯ ಪ್ರವೇಶಿಸಿ, ಭರವಸೆ ನೀಡದಿದ್ದರೆ ಫೆ. 04 ರಂದು ಮತ್ತೆ ಬಂದ್ ಮಾಡುತ್ತೇವೆ ಎಂದು ವಾಟಾಳ್ ನಾಗರಾಜ್ ಕರೆ ನೀಡದ್ದರು. ಇದನ್ನು ಪ್ರಶ್ನಿಸಿ, ಬಂದ್’ಗೆ ಅವಕಾಶ ನೀಡಬೇಡಿ ಎಂದು ಕೋರಿ ರಾಜಾಜಿನಗರದ ಶ್ರದ್ಧಾ ಪೋಷಕರ ಸಂಘ, ಇತರರು ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ  ಹಂಗಾಮಿ ಮುಖ್ಯ ನ್ಯಾಯಮೂರ್ತಿ ಹೆಚ್.ಜಿ.ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ವಿಭಾಗೀಯ ಪೀಠ, ಬಂದ್ ನಡೆಸುವುದು ಅಸಂವಿಧಾನಿಕ. ಬಂದ್‌’ಗೆ ಕರೆ ನೀಡುವುದು ಮೂಲಭೂತ ಹಕ್ಕಲ್ಲ. ಜನಸಾಮಾನ್ಯರಿಗೆ ತೊಂದರೆ ಮಾಡುವಂತಿಲ್ಲವೆಂದು ಅಭಿಪ್ರಾಯಪಟ್ಟಿದೆ.

NO COMMENTS

LEAVE A REPLY