ರಾಕ್ಹಿಂಗ್ ಸ್ಟಾರ್ ಯಶ್’ಗೆ ರಾಜಕೀಯಕ್ಕೆ ಬರುವಂತೆ ಒತ್ತಡ…

ರಾಕ್ಹಿಂಗ್ ಸ್ಟಾರ್ ಯಶ್’ಗೆ ರಾಜಕೀಯಕ್ಕೆ ಬರುವಂತೆ ಒತ್ತಡ…

251
0
SHARE

ಬೆಂಗಳೂರು(ಫೆ.02.2018):ಸದ್ಯಕ್ಕೆ ರಾಜಕೀಯಕ್ಕೆ ಹೋಗುವ ಯಾವುದೇ ಉದ್ದೇಶ ತಮಗಿಲ್ಲ. ಆದರೆ ವಿವಿಧ ಕಡೆಯಿಂದ ರಾಜಕೀಯವಾಗಿ ತಮ್ಮ ಮೇಲೆ ಒತ್ತಡ ಇರುವುದು ನಿಜ ಎಂದು ರಾಕ್ಹಿಂಗ್ ಸ್ಟಾರ್ ಯಶ್ ಹೇಳಿದ್ದಾರೆ.

ವಿಧಾನಸಭೆಗೆ ಅತ್ಯುತ್ತಮ ಜನಪ್ರತಿನಿಧಿಗಳು ಆಯ್ಕೆಯಾಗಬೇಕು ಎಂಬ ಆಸೆ ನನಗೂ ಇದೆ. ಆದರೆ ನಾನೇ ಈ ಬಾರಿ ಚುನಾವಣೆ ಕಣಕ್ಕೆ ಇಳಿಯಲಾರೆ. ಯಾವ ಕ್ಷೇತ್ರದಿಂದಲೂ ಸ್ಪರ್ಧಿಸಲಾರೆ.ಅದರ ಬಗ್ಗೆ ನನಗೆ ಆಸಕ್ತಿಯೂ ಇಲ್ಲ. ರಾಜಕೀಯದಿಂದ ದೂರ ಇದ್ದುಕೊಂಡೇ ಜನರಿಗಾಗಿ ಮಾಡುವ ಕೆಲಸ ಬೇಕಾದಷ್ಟಿದೆ ಎಂದು ಹೇಳಿದ್ದಾರೆ ಯಶ್.

ಆದರೆ ಒಂದು ರಾಜಕೀಯ ಪಕ್ಷ ಹೇಗಿರಬೇಕು ಎಂಬ ಸ್ಪಷ್ಟ ಕಲ್ಪನೆ ನನಗಿದೆ. ಅಭಿವೃದ್ಧಿ ಹಾಗೂ ಜನಪರ ಕೆಲಸಗಳ ಬಗ್ಗೆಯೂ ನನ್ನದೇ ಆದ ಪರಿಕಲ್ಪನೆಗಳಿವೆ. ಸೈದ್ಧಾಂತಿಕವಾಗಿಯೂ ನನಗೆ ಸ್ಪಷ್ಟ ನಿಲುವುಗಳಿವೆ. ಹಾಗಂತ ನಾನೇ ಖುದ್ದು ಅಖಾಡಕ್ಕೆ ಇಳಿಯಲಾರೆ.

ಸ್ಪರ್ಧಿಸಿ ಒಂದು ಕ್ಷೇತ್ರಕ್ಕೆ ಮಾತ್ರ ಸೀಮಿತ ಆಗುವುದು ಬೇಡ ಎಂಬುದು ನನ್ನ ಅಭಿಪ್ರಾಯ. ಜತೆಗೆ, ಅಭಿವೃದ್ಧಿಗೆ ಸಂಬಂಧಿಸಿದಂತೆ ಚರ್ಚೆ ನಡೆಯಬೇಕು. ಇಡೀ ರಾಜ್ಯದ ಜನತೆಗೆ ಏನಾದರೂ ಮಾಡಬೇಕು ಎಂಬ ತುಡಿತವಿದೆ ಎಂದು ಯಶ್‌ ತಿಳಿಸಿದ್ದಾರೆ.

NO COMMENTS

LEAVE A REPLY