ರೈಲಿನಲ್ಲಿ ನಟಿಯೊಬ್ಬಳಿಗೆ ಲೈಂಗಿಕ ಕಿರುಕುಳ

ರೈಲಿನಲ್ಲಿ ನಟಿಯೊಬ್ಬಳಿಗೆ ಲೈಂಗಿಕ ಕಿರುಕುಳ

179
0
SHARE

ಬೆಂಗಳೂರು (ಫೆ.02.2018): ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಲೆಯಾಳಂ ನಟಿಯೊಬ್ಬಳಿಗೆ ಕಿರಾತಕನೊಬ್ಬ ಲೈಂಗಿಕ ಕಿರುಕುಳ ನೀಡಿದ್ದಾನೆ.

ಕಣ್ಣೂರಿನಿಂದ ತಿರುವನಂತಪುರಂಗೆ ತೆರಳುತ್ತಿದ್ದ ನಟಿ ಸನುಷಾ ಸಂತೋಷ್​’ಗೆ ತಮಿಳುನಾಡಿನ ಌಂಡೋ ಬೋಸ್ ಎಂಬಾತ ಕಿರುಕುಳ ಕೊಟ್ಟಿದ್ದಾನೆ. ರೈಲಿನಲ್ಲಿ ಮಲಗಿದ್ದ ನಟಿಯ ತುಟಿಯನ್ನು ಮುಟ್ಟಿ ಅಸಭ್ಯ ವರ್ತಿಸಿದ್ದಾನೆ. ಈ ವೇಳೆ ಎಚ್ಚೆತ್ತ ನಟಿ ಆರೋಪಿಯನ್ನು ಥಳಿಸಿ ತನ್ನ ರಕ್ಷಣೆ ಮಾಡಿಕೊಂಡಿದ್ದಾಳೆ. ಇಷ್ಟಾದರೂ  ಸಹ ಪ್ರಯಾಣಿಕರು ಮಾತ್ರ ನಟಿಯ ನೆರವಿಗೆ ಬಾರಲಿಲ್ಲ. ಹೀಗಾಗಿ ನಟಿ ಸನುಷಾ ಪೊಲೀಸರ ಮೊರೆ ಹೋಗಿದ್ದಾಳೆ.

ಸುಮಾರು 40ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ಸನುಷಾ, ಕನ್ನಡದ ‘ಸಂತೆಯಲ್ಲಿ ನಿಂತ ಕಬೀರ’ ಸಿನಿಮಾದಲ್ಲೂ ನಟಿಸಿದ್ದಾರೆ.

NO COMMENTS

LEAVE A REPLY