2018 ರ ಬಜೆಟ್ ನಲ್ಲಿನ ಮುಖ್ಯಾಂಶಗಳು…

2018 ರ ಬಜೆಟ್ ನಲ್ಲಿನ ಮುಖ್ಯಾಂಶಗಳು…

255
0
SHARE

ನವದೆಹಲಿ(ಫೆ.1.2018):  ಕೇಂದ್ರ ಹಣಕಾಸು ಸಚಿವ ಅರುಣ್ ಜಟ್ಲಿ ಇಂದು 2018-19ನೇ ಸಾಲಿನ ಬಜೆಟ್ ಮಂಡಿಸಿದ್ದು, ಬಜೆಟ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬಜೆಟ್ ನಲ್ಲಿನ ಪ್ರಮುಖಾಂಶಗಳು ಹೀಗಿವೆ…

ಆರ್ಥಿಕ ಸುಧಾರಣೆ ಪ್ರಕ್ರಿಯೆಯನ್ನು ಸಮರ್ಥವಾಗಿ ನಿರ್ವಹಿಸಿದ್ದೇವೆ. ಕೃಷಿ ಕ್ಷೇತ್ರವನ್ನು ಹೆಚ್ಚು ಬಲಪಡಿಸಿದ್ದೇವೆ.

5ನೇ ಬಾರಿ ಬಜೆಟ್ ಮಂಡಿಸುತ್ತಿರುವ ಜೇಟ್ಲಿ. 4 ವರ್ಷಗಳಿಂದ ಸ್ವಚ್ಛ ಆಡಳಿತ ನೀಡುತ್ತಿದ್ದೇವೆ. ಬಡತನ ನಿರ್ಮೂಲನೆಗೆ ಗಮನ ಹರಿಸಿದ್ದೇವೆ

ದೇಶದ ಜನರಿಗೆ ನೀಡಿದ್ದ ಭರವಸೆಯಂತೆ ನಡೆದುಕೊಂಡಿದ್ದೇವೆ. ಪ್ರಪಂಚದಲ್ಲೇ 5ನೇ ಅತೀದೊಡ್ಡ ಆರ್ಥಿಕ ದೇಶವಾಗುವತ್ತ ಹೆಜ್ಜೆ ಹಾಕುತ್ತಿದ್ದೇವೆ. ಆರ್ಥಿಕ ಸುಧಾರಣಾ ಪ್ರಕ್ರಿಯೆ ಜಾರಿ ಮಾಡಿದ್ದೇವೆ.

 ಉತ್ಪಾದನಾ ವಲಯ ಪ್ರಗತಿಯಲ್ಲಿದೆ. ಭಾರತ ಉತ್ಪಾದನೆಯಲ್ಲಿ ಶೀಘ್ರವಾಗಿ 5ನೇ ಸ್ಥಾನಕ್ಕೇರಲಿದೆ. 2ನೇ ದೈವಾರ್ಷಿಕದಲ್ಲಿ ಭಾರತದ ಜಿಡಿಪಿ ಶೇ.7.5ರ ನಿರೀಕ್ಷೆಯಲ್ಲಿದ್ದೇವೆ.

ಈ ಬಜೆಟ್ ನಲ್ಲಿ ಕೃಷಿ, ಶಿಕ್ಷಣ, ಉದ್ಯೋಗಕಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಕಳೆದ 2 ವರ್ಷಗಳಲ್ಲಿ ದೇಶದ ಆರ್ಥಿಕತೆಯಲ್ಲಿ ಸುಧಾರಣೆ. ನಾವು ಬಂದಾಗ ಆರ್ಥಿಕತೆಯಲ್ಲಿ ನ್ಯೂನತೆಗಳಿದ್ದವು.

ಕೃಷಿ ವಲಯದಲ್ಲಿ ವೈಜ್ಞಾನಿಕ ಪದ್ಧತಿ ಮೂಲಕ ಉತ್ಪಾದನೆ ಹೆಚ್ಚಳ. ಸರ್ಕಾರಿ ಯೋಜನೆಗಳು ನೇರವಾಗಿ ಜನರಿಗೆ ತಲುಪಿವೆ. ಬಲಿಷ್ಠ ಭಾರತ ನಿರ್ಮಾಣಕ್ಕೆ ಕಟಿಬದ್ಧರಾಗಿದ್ದೇವೆ. ಮೂಲಭೂತ ಸುಧಾರಣೆಗಳನ್ನು ಜಾರಿಗೆ ತಂದಿದ್ದೇವೆ. ಎನ್ ಡಿಎ ಅವಧಿಯಲ್ಲಿನ ಎಫ್ ಡಿಐ ನಲ್ಲಿ ಭಾರೀ ಪ್ರಮಾಣದ ಏರಿಕೆ.

ನೇರ ನಗದು ವರ್ಗಾವಣೆ ಮೂಲಕದ ಪಾರದರ್ಶಕತೆ. ಕೃಷಿ ಉತ್ಪಾದನೆ ಹೆಚ್ಚಳಕ್ಕೆ ಕ್ರಮ. ಬಡವರಿಗಾಗಿ ಜನರಿಕ್ ಔಷಧ ಕೇಂದ್ರಗಳ ಸ್ಥಾಪನೆ.

ಕೃಷಿ ಉತ್ಪನ್ನಗಳ ಸಾಗಣೆ, ಉತ್ತಮ ಬೆಲೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಒಂದೇ ದಿನದಲ್ಲಿ ಪಾಸ್ ಪೋರ್ಟ್ ನೀಡಿಕೆಗೆ ಕ್ರಮ.

 275 ಮಿಲಿಯನ್ ಟನ್ ಆಹಾರ ಉತ್ಪಾದನೆ. ಈ ರಬಿ ಕೃಷಿಯಲ್ಲಿ ಅಧಿಕ ಇಳುವರಿ ಬಂದಿದೆ. ಕೃಷಿ ಉತ್ಪಾದನಾ ದರ ಶೇ.1.5ರಷ್ಟು ಇಳಿಕೆಗೆ ಕ್ರಮ.

ದೇಶದ ಉತ್ಪಾದನಾ ಸಾಮರ್ಥ್ಯ ಶೇ.15ರಷ್ಟು ಹೆಚ್ಚಳ ನಿರೀಕ್ಷೆ. 470ಎಪಿಎಂಸಿ ಮಾರುಕಟ್ಟೆಗಳು ಆನ್ ಲೈನ್ ಆಗಿವೆ. ಇದು ರೈತ ಸ್ನೇಹಿ ಬಜೆಟ್ ಎಂದ ಜೇಟ್ಲಿ.

2020ಕ್ಕೆ ರೈತರ ಆದಾಯ ದ್ವಿಗುಣಗೊಳಿಸುವ ಗುರಿ. ಕೃಷಿಯನ್ನು ಲಾಭೋದ್ಯಮವಾಗಿಸಲು ಕೇಂದ್ರದ ಸಂಕಲ್ಪ. ಭಾರತವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವುದೇ ಕೇಂದ್ರದ ಗುರಿ.

ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ರಾಜ್ಯಪಾಲರುಗಳ ವೇತನ ಹೆಚ್ಚಳ. ರಾಷ್ಟ್ರಪತಿಗೆ ಮಾಸಿಕ 5 ಲಕ್ಷ ರೂ ವೇತನವಾದರೆ ರಾಜ್ಯ ಪಾಲರಿಗೆ ಮಾಸಿಕ 3.5 ಲಕ್ಷ ರೂಪಾಯಿ ವೇತನ. ಉಪರಾಷ್ಟ್ರಪತಿಗೆ 4 ಲಕ್ಷ ರೂಪಾಯಿ. ಪ್ರತಿ 5 ವರ್ಷಕ್ಕೊಮ್ಮೆ ಶಾಸಕರು ಮತ್ತು ಸಂಸದರ ವೇತನ ಪರಿಷ್ಕರಣೆ.

ವೈಯಕ್ತಿಕ ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಹಿಂದಿನ ಆದಾಯ ತೆರಿಗೆ ಮಿತಿಯೇ ಮುಂದುವರಿಕೆ. ನೇರ ತೆರಿಗೆಯಲ್ಲಿ ಶೇ 17 ರಷ್ಟು ಹೆಚ್ಚಳವಾಗಿದೆ. ಸದ್ಯ ದೇಶದ ತೆರಿಗೆ ದಾರರು 8 ಕೋಟಿ , 85 ಲಕ್ಷ ಹೊಸ ತೆರಿಗೆದಾರರು ಸೇರ್ಪಡೆಯಾಗಿದ್ದಾರೆ.

ವಿತ್ತೀಯ ಕೊರತೆ ಶೇಕಡಾ 3 ಕ್ಕೆ ಇಳಿಕೆ. ತೆರಿಗೆ ಯೇತರ ಆದಾಯದಲ್ಲಿ ಏರಿಕೆ. 85 ಲಕ್ಷ ಜನರು ಐಟಿ ಆರ್‌ ಸಲ್ಲಿಕೆ ಮಾಡಿದ್ದಾರೆ.14 ಸರ್ಕಾರಿ ಕಂಪೆನಿಗಳು ಶೇರು ಮಾರುಕಟ್ಟೆಗೆ ಪ್ರವೇಶ. ಸಮಗ್ರ ಬಂಗಾರ ನೀತಿ ಜಾರಿ. ಚಿನ್ನ ನಗದೀಕರಣ ವ್ಯವಸ್ಥೆಯಲ್ಲಿ ಬದಲಾವಣೆ.

5 ಲಕ್ಷ ಹಳ್ಳಿಗಳಲ್ಲಿ ವೈ ಫೈ ಸೌಲಭ್ಯ. ಚನ್ನೈ ನಲ್ಲಿ 5 ಜಿ ಅಧ್ಯಯನ ಕೇಂದ್ರ .ಟೋಲ್‌ಗ‌ಳಲ್ಲಿ ಕ್ಯಾಶ್‌ ಬದಲಿಗೆ ಇ ಪೇಮೆಂಟ್‌. 1 ಲಕ್ಷ ಗ್ರಾಮ ಪಂಚಾಯತ್‌ಗಲ್ಲಿ ಓಎಫ್ಸಿ ಕೇಬಲ್‌ ಸಂಪರ್ಕ.

600 ರೈಲ್ವೆ ನಿಲ್ದಾಣಗಳ ಅಭಿವೃದ್ಧಿಗೆ ಯೋಜನೆ. ಟೆಕ್ಸ್‌ಟೈಲ್‌ ಉದ್ಯಮಕ್ಕೆ 7148 ಕೋಟಿ ರೂ ಕೊಡುಗೆ.124 ವಿಮಾನ ನಿಲ್ದಾಣಗಳ ಅಭಿವೃದ್ಧಿ. ಬೆಂಗಳೂರಿಗೆ ಸಬ್‌ ಅರ್ಬನ್‌ ರೈಲು ಘೋಷಣೆ. 2018 ರ ಒಳಗೆ 18 ಸಾವಿರ ಕಿ.ಮೀ ರೈಲ್ವೇ ಮಾರ್ಗ ಡಬ್ಲಿಂಗ್‌. ಎಲ್ಲಾ ರೈಲುಗಳಲ್ಲಿ ವೈಫೈ, ಸಿಸಿಟಿವಿ. ರೈಲು ನಿಲ್ದಾಣಗಳಲ್ಲಿ 25 ಸಾವಿರ ಎಸ್ಕಲೇಟರ್‌ ಸ್ಥಾಪನೆ .

ಮೂಲಭೂತ ಸೌಕರ್ಯ ಅಭಿವೃದ್ಧಿಗೆ 50 ಲಕ್ಷ ಕೋಟಿ .9 ಸಾವಿರ ಕೀ.ಮೀ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ. ಸ್ಮಾರ್ಟ್‌ ಸಿಟಿಗೆ ಹೊಸದಾಗಿ 99 ನಗರ.ಈ ವರ್ಷ 70 ಲಕ್ಷ ಉದ್ಯೋಗ ಸೃಷ್ಟಿ , ಮೀನುಗಾರಿಕೆ , ಹೈನುಗಾರಿಕೆಗೂ ಕಿಸಾನ್‌ ಕ್ರೆಡಿಟ್‌ ಕಾರ್ಡ್‌.ಮೀನುಗಾರಿಕೆಗೆ 10 ಸಾವಿರ ಕೋಟಿ ಅನುದಾನ. 24 ಹೊಸ ಮೆಡಿಕಲ್‌ ಕಾಲೇಜುಗಳ ಘೋಷಣೆ. 8 ಕೋಟಿ ಬಡ ಮಹಿಳೆಯರಿಗೆ ಉಚಿತ ಗ್ಯಾಸ್‌ ಸೌಲಭ್ಯ .

ಟಿಬಿ ರೋಗಿಗಳ ಚಿಕಿತ್ಸೆಗಾಗಿ, ಪೌಷ್ಟಿಕಾಂಶಕ್ಕಾಗಿ 600ಕೋಟಿ ರೂಪಾಯಿ ಮೀಸಲು. 16730 ಕೋಟಿ ರೂ ವೆಚ್ಚದಲ್ಲಿ ಗ್ರಾಮೀಣ ಶೌಚಾಲಯಗಳ ನಿರ್ಮಾಣ.ಸ್ವಚ್ಛತೆಗೆ ಹೆಚ್ಚಿನ ಆಧ್ಯತೆ.

ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆ – 10 ಕೋಟಿ ಕುಟುಂಬದ ಬಡ ಮತ್ತು ಅಶಕ್ತ 50 ಕೋಟಿ ಮಂದಿಗೆ ಲಾಭ -ಬಿಪಿಎಲ್‌ ಕಾರ್ಡ್‌ ಹೊಂದಿರುವ 1 ಕುಟುಂಬಕ್ಕೆ 5 ಲಕ್ಷ ರೂಪಾಯಿ ವರೆಗೆ ಉಚಿತ ಚಿಕಿತ್ಸೆ.  ಇದು ವಿಶ್ವದ ಅತೀ ದೊಡ್ಡ ಸರ್ಕಾರಿ ಫ‌ಂಡಿಂಗ್‌ ಆರೋಗ್ಯ ವಿಮಾ ಯೋಜನೆ.

ಸ್ವಸ್ಥ ಭಾರತ ಸಮೃದ್ಧ ಭಾರತ – ಆಯುಷ್ಮಾನ್‌ ಭಾರತ್‌ ಕಾರ್ಯಕ್ರಮ ನ್ಯೂ ಇಂಡಿಯಾ ದೇಶಾದ್ಯಂತ ಒಂದುವರೆ ಲಕ್ಷ ಆರೋಗ್ಯ ಕೇಂದ್ರ ಸ್ಥಾಪನೆ. ಅರ್ಹರಿಗೆ ಉಚಿತ ಚಿಕಿತ್ಸೆ ಮತ್ತು ಔಷಧಿ.ಶಿಕ್ಷಕರ ತರಬೇತಿಗಾಗಿ ಸಮಗ್ರ ಬಿ.ಎಡ್‌ ಕೋರ್ಸ್‌. ಶಾಲೆಗಳಲ್ಲಿ ಡಿಜಿಟಲ್‌ ಬೋರ್ಡ್‌. ಎಸ್‌ಟಿ ವಿದ್ಯಾರ್ಥಿಗಳಿಗಾಗಿ ಏಕಲವ್ಯ ಶಾಲೆ ಸ್ಥಾಪನೆ

2018-19 ರಲ್ಲಿ ಗ್ರಾಮೀಣ ಭಾಗದಲ್ಲಿ ಮನೆ ನಿರ್ಮಾಣ , ಪ್ರಧಾನ ಮಂತ್ರಿ ಆವಾಸ್‌ ಯೋಜನೆ ಮೂಲಕ 2022 ರ ವೇಳೆಗೆ 33 ಲಕ್ಷ ಮನೆಗಳ ನಿರ್ಮಾಣ ಗುರಿ.

ಪ್ರಧಾನಮಂತ್ರಿ ಆವಾಸ್ ಯೋಜನೆ ಮೂಲಕ 2022ರವರೆಗೆ ಮನೆ ಇಲ್ಲದವರಿಗೆ 33 ಲಕ್ಷ ಮನೆ ನಿರ್ಮಾಣದ ಗುರಿ.2018-19ನೇ ಸಾಲಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ ಮನೆ ನಿರ್ಮಾಣ.ಹೆರಿಗೆ ರಜೆ 24 ವಾರದಿಂದ 26 ವಾರಕ್ಕೆ ಹೆಚ್ಚಳ. 2022 ರ ವೇಳೆಗೆ ಎಲ್ಲಾ ಬಡವರಿಗೂ ಮನೆ . 4 ಕೋಟಿ ಮನೆಗಳಿಗೆ ಉಚಿತ ವಿದ್ಯುತ್‌ . ಕೃಷಿ ಉತ್ಪನ್ನಗಳ ರಫ್ತಿಗೆ ಮುಕ್ತ ಅವಕಾಶ.

ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ತೆರಿಗೆ ಪ್ರಮಾಣದಲ್ಲಿ ಇಳಿಕೆ.ಸ್ಟಾರ್ಟಪ್‌ ಕಂಪೆನಿಗಳಿಗೆ ಉತ್ತೇಜನ. 

ಕೃಷಿ ಉತ್ಪನ್ನಗಳ ಬೆಲೆ ಏರಿಕೆಗೆ ಸರ್ಕಾರದ ಚಿಂತನೆ. ದೇಶದ 8 ಲಕ್ಷ ಗ್ರಾಮೀಣ ಪ್ರದೇಶದ ಬಡ ಮಹಿಳೆಯರಿಗೆ ಉಚಿತ ಉಜ್ವಲ ಗ್ಯಾಸ್ ವಿತರಣೆ. ಹರ್ಯಾಣ, ಪಂಜಾಬ್, ದೆಹಲಿ, ಉತ್ತರಪ್ರದೇಶಕ್ಕೆ ವಿಶೇಷ ಪ್ಯಾಕೇಜ್.

ರೈತರ ಕಿಸಾನ್ ಕಾರ್ಡ್ ಗಳು ಮೀನುಗಾರರಿಗೂ ವಿಸ್ತರಣೆ. ರೈತ ಮಾರುಕಟ್ಟೆ ಸರಳ ಸಂಪರ್ಕ ಯೋಜನೆ. ಕೃಷಿ ವಸ್ತು ರಫ್ತು ಮೇಲಿನ ನಿರ್ಬಂಧ ತೆರವು. ಕೃಷಿಗಾಗಿಯೇ ಒಂದು ಲಕ್ಷ ಕೋಟಿ ಸಾಲ ನೀಡುವ ಗುರಿ.

ಆಪರೇಷನ್ ಗ್ರೀನ್ ಗೆ 500 ಕೋಟಿ, 52 ಮೆಗಾ ಫುಡ್ ಪಾರ್ಕ್ ಸ್ಥಾಪನೆಯ ಘೋಷಣೆ, 10 ಸಾವಿರ ಕೋಟಿ ರೂ. ವೆಚ್ಚದಲ್ಲಿ 2 ಕ್ಷೇತ್ರಗಳಿಗೆ ಅನುದಾನ.

ಆಹಾರ ಸಂಸ್ಕರಣಾ ಕ್ಷೇತ್ರ ಶೇ.8ರಷ್ಟು ಅಭಿವೃದ್ಧಿ ಕಂಡಿದೆ. 1290ಕೋಟಿ ರೂಪಾಯಿಯಲ್ಲಿ ಬಿದಿರು ಯೋಜನೆ. ಮೀನುಗಾರಿಕೆ, ಪಶು ಸಂಗೋಪನೆಗೆ 10 ಸಾವಿರ ಕೋಟಿ.

ಆರೋಗ್ಯ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಗೆ ಕ್ರಮ. ಒಂದೇ ದಿನದಲ್ಲಿ ಕಂಪನಿ ನೋಂದಣಿಗೂ ಅವಕಾಶ. ಆಪರೇಷನ್ ಗ್ರೀನ್ ಯೋನೆ, ಇದು 500 ಕೋಟಿ ರೂ. ಯೋಜನೆ. ರೈತರು ಬೆಳೆದ ಹಣ್ಣು, ತರಕಾರಿಗಳ ಸಂಸ್ಕರಣೆಗಾಗಿ ಯೋಜನೆ.

ಮೂಲಸೌಕರ್ಯಕ್ಕೆ ಒತ್ತು, ರಾಜ್ಯಗಳೊಂದಿಗೆ ಸಹಕಾರ. ರೈತರ ಅನುಕೂಲಕ್ಕೆ 22 ಸಾವಿರ ಮಾರುಕಟ್ಟೆ , ಗ್ರಾಮೀಣ ಮೂಲಸೌಕರ್ಯಕ್ಕೆ 22ಸಾವಿರ ಕೋಟಿ ಅನುದಾನ.

 ಕಸ್ಟಮ್‌ ಡ್ಯೂಟಿ ಹೆಚ್ಚಳ, ಟಿವಿ, ಮೊಬೈಲ್‌, ಕಂಪ್ಯೂಟರ್‌, ಲ್ಯಾಪ್‌ಟಾಪ್‌ಗಳು ದುಬಾರಿ

 1 ಲಕ್ಷ ಮೀರಿದ ಡಿವಿಡೆಂಡ್‌ ಗೆ ಶೇ.10 ತೆರಿಗೆ. 1 ಲಕ್ಷಕ್ಕೂ ಹೆಚ್ಚು ನಗದು ವ್ಯವಹಾರಕ್ಕೆ ಅವಕಾಶವಿಲ್ಲ.

NO COMMENTS

LEAVE A REPLY