ಕೇಂದ್ರ ಸರ್ಕಾರದ ಬಜೆಟ್ ಮಂಡನೆಯಲ್ಲಿ ಬಡವರಿಗೆ ಭರ್ಜರಿ ಉಡುಗೊರೆ…

ಕೇಂದ್ರ ಸರ್ಕಾರದ ಬಜೆಟ್ ಮಂಡನೆಯಲ್ಲಿ ಬಡವರಿಗೆ ಭರ್ಜರಿ ಉಡುಗೊರೆ…

231
0
SHARE

ನವದೆಹಲಿ (ಫೆ.01.2018): ಕೇಂದ್ರ ಸರ್ಕಾರದ 2018ನೇ ಸಾಲಿನ ಬಜೆಟ್ ಮಂಡನೆಯಾಗಿದ್ದು, ವಿವಿಧ ಆರೋಗ್ಯ ಸೇವೆಗಳಿಗೆ ಹೆಚ್ಚು  ಒತ್ತು ನೀಡಲಾಗಿದೆ.

ಬಜೆಟ್ ಮಂಡಿಸಿದ ಹಣಕಾಸು ಸಚಿವ ಅರುಣ್ ಜೇಟ್ಲಿ ರಾಷ್ಟ್ರೀಯ ಆರೋಗ್ಯ ವಿಮಾ ಯೋಜನೆಯನ್ನು ಘೋಷಿಸಿದ್ದಾರೆ.  ಈ ಯೋಜನೆಯಿಂದ ಒಟ್ಟು 10 ಕೋಟಿ ಬಡ ಕುಟುಂಬಗಳು ಲಾಭವನ್ನು ಪಡೆದುಕೊಳ್ಳಲಿವೆ.

ಇದರಡಿಯಲ್ಲಿ ಒಂದು ಕಟುಂಬವು ಒಂದು ವರ್ಷಕ್ಕೆ 5 ಲಕ್ಷದವರೆಗೆ ಉಚಿತ ಚಿಕಿತ್ಸೆಯ ಸೌಲಭ್ಯವನ್ನು ಪಡೆದುಕೊಳ್ಳಲಿದೆ. 50 ಕೋಟಿ ಜನರು ಆರೋಗ್ಯ ವಿಮಾ ಯೋಜನೆಯ ಅಡಿಯಲ್ಲಿ ಅನುಕೂಲವನ್ನು ಪಡೆದುಕೊಳ್ಳಲಿದ್ದಾರೆ.

ಇನ್ನು ಗ್ರಾಮೀಣ ಪ್ರದೇಶದಲ್ಲಿ ವಾಸ ಮಾಡುವ ಟಿಬಿ ರೋಗಿಗಳಿಗೆ 600 ಕೋಟಿ ಮೀಸಲಿಡಲಾಗಿದೆ. 24 ಹೊಸ  ಸರ್ಕಾರಿ ಮೆಡಿಕಲ್ ಕಾಲೇಜುಗಳನ್ನು ತೆರೆಯುವ ಬಗ್ಗೆ ಬಜೆಟ್ ನಲ್ಲಿ ಘೋಷಿಸಲಾಗಿದೆ. ಜಿಲ್ಲಾಸ್ಪತ್ರೆಗಳನ್ನು ಉನ್ನತೀಕರಣಗೊಳಿಸುವುದಾಗಿ ಹೇಳಿದ್ದಾರೆ.

NO COMMENTS

LEAVE A REPLY