ಮೈಸೂರಿನಲ್ಲಿ ಭೀಕರ ಅಪಘಾತ: ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಸಾವು…

ಮೈಸೂರಿನಲ್ಲಿ ಭೀಕರ ಅಪಘಾತ: ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಸಾವು…

696
0
SHARE

ಮೈಸೂರು,ಜನವರಿ 31. –

ಚಂದ್ರಗ್ರಹಣಕ್ಕೂ ಮುನ್ನ ಮೈಸೂರಿನಲ್ಲಿ ಭೀಕರ ಅಪಘಾತ ಸಂಭವಿಸಿದೆ. ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೈಸೂರಿನ ಹೊರವಲಯದ ದಟ್ಟಕಳ್ಳಿ ರಿಂಗ್ ರೋಡ್ ಬಳಿಯ ವಿಶ್ವಪ್ರಜ್ಞಾ ಪಿಯು ಕಾಲೇಜು ಬಳಿ ಈ ಘಟನೆ ನಡೆದಿದೆ. ಸಾವನ್ನಪ್ಪಿರುವವರ ವಿಳಾಸ ತಿಳಿದು ಬಂದಿಲ್ಲ. ಕಾರುನಲ್ಲಿ ಐದು ಮಂದಿ ತೆರಳುತ್ತಿದ್ದರು. ಈ ನಡುವೆ ರಸ್ತೆ ವಿಭಜಕಕ್ಕೆ  ಕಾರು ಡಿಕ್ಕಿಯಾಗಿ ಓರ್ವ ಯುವತಿ ಇಬ್ಬರು ಯುವಕರು ಸೇರಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ.

ಗಾಯಾಳುವನ್ನು ಕೆ.ಆರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.  ಕಾರನ್ನು ಅತಿವೇಗವಾಗಿ ಚಾಲನೆ ಮಾಡುತ್ತಿದ್ದುದೇ ಘಟನೆಗೆ ಕಾರಣ ಎಂದು ಹೇಳಲಾಗುತ್ತಿದೆ.

ಸೆಲ್ಫ್ ಆಕ್ಸಿಡೆಂಟ್ ಪರಿಣಾಮ ಕಾರು ಪುಡಿ ಪುಡಿಯಾಗಿದ್ದು, ಡಿಕ್ಕಿಯ ರಬಸಕ್ಕೆ ಮೂವರ ಮೃತ ದೇಹ ಚೆಲ್ಲಾ ಪಿಲ್ಲಿಯಾಗಿವೆ. ಕುವೇಂಪು ನಗರ ಉಪ ಸಂಚಾರಿ ಠಾಣೆಯಲ್ಲಿ  ಈ ಕುರಿತು ಪ್ರಕರಣ ದಾಖಲಾಗಿದೆ.

NO COMMENTS

LEAVE A REPLY