ಮೈಸೂರಿನಲ್ಲಿ ವಕೀಲರೊಬ್ಬರ ಮೇಲೆ ಹಲ್ಲೆ: ಪಿಎಸ್ ಐ ಅಮಾನತು..

ಮೈಸೂರಿನಲ್ಲಿ ವಕೀಲರೊಬ್ಬರ ಮೇಲೆ ಹಲ್ಲೆ: ಪಿಎಸ್ ಐ ಅಮಾನತು..

220
0
SHARE

ಮೈಸೂರು(ಜ.31.2018):ವಕೀಲ ಗೋಕುಲ್ ಗೋವರ್ಧನ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಯಲ್ಲಾಲಿಂಗ ಅವರನ್ನು ಅಮಾನತು ಮಾಡಿ ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ನಜರಾಬಾದ್ ಠಾಣಾ ವ್ಯಾಪ್ತಿಯ ಬಳಿಯ ಶಾಲೆಯಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂದು ದೂರು ನೀಡಲು ಹೋದ ಗೋಕುಲ್ ಗೋವರ್ಧನ್  ಅವರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದರು. ಈ ಸಂಬಂಧ ಸಬ್ ಇನ್ಸ್ ಪೇಕ್ಟರ್ ಯಲ್ಲಾಲಿಂಗ ಅವರನ್ನು ಅಮಾನತು ಮಾಡುವಂತೆ ಆಗ್ರಹಿಸಿ ವಕೀಲರು ಪ್ರತಿಭಟನೆ ನಡೆಸಿದ್ದರು.

ಪ್ರತಿಭಟನೆ ಹಿನ್ನೆಲೆ ಪಿಎಸ್ ಐ ಯಲ್ಲಾಲಿಂಗ ಅವರನ್ನು ನಜರಬಾದ್ ಪೊಲೀಸ್ ಠಾಣೆಯಿಂದ ವಿವಿ ಪುರಂ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ಈ ನಡುವೆ ಯಲ್ಲಾಲಿಂಗ ಅವರನ್ನು ಅಮಾನತು ಮಾಡುವಂತೆ ಆಗ್ರಹಿಸಿ ವಕೀಲರ ಪ್ರತಿಭಟನೆ ಹೆಚ್ಚಾದ ಹಿನ್ನೆಲೆ ಶಿಕ್ಷೆ /ಅಮಾನತ್ತು /7/2017-18 30-1-2018ರ ಪ್ರಕಾರ ಇಲಾಖೆ ವಿಚಾರಣೆ ಬಾಕಿಯಿರುವಂತೆ ಪಿಎಸ್ ಐ ಯಲ್ಲಾಲಿಂಗ ಅವರನ್ನು ಅಮಾನತ್ತಿನಲ್ಲಿಡಲಾಗಿದೆ.

NO COMMENTS

LEAVE A REPLY