ಕನ್ನಡ ಸಿನಿಮಾ ಪರದೆಯಲ್ಲಿ ಒಟ್ಟಿಗೆ ಕಾಣಿಸಲಿರುವ ತಲೈವಾ ಹಾಗೂ ಕಿಚ್ಚ ಸುದೀಪ್

ಕನ್ನಡ ಸಿನಿಮಾ ಪರದೆಯಲ್ಲಿ ಒಟ್ಟಿಗೆ ಕಾಣಿಸಲಿರುವ ತಲೈವಾ ಹಾಗೂ ಕಿಚ್ಚ ಸುದೀಪ್

521
0
SHARE

ಮೈಸೂರು(ಜ.29.2018):ರಜನಿಕಾಂತ್ ಕನ್ನಡ ಸಿನಿಮಾ ಮಾಡುತ್ತಾರೆಂದು ಬಹಳ ದಿನಗಳಿಂದ ಗಾಳಿ ಸುದ್ದಿ ಗಾಂಧಿ ನಗರದಲ್ಲಿ ಹರಿದಾಡುತ್ತಿತ್ತು. ಈಗ ಈ ಸುದ್ದಿ ಪಕ್ಕಾ ಆಗಿದ್ದು ರಜನೀಕಾಂತ್ ಕನ್ನಡದಲ್ಲಿ ಸಿನಿಮಾ ಮಾಡುವುದು ಖಚಿತವಾಗಿದೆ. ಈ ಚಿತ್ರಕ್ಕೆ ಸುದೀಪ್ ಇನ್ನೊಬ್ಬ ನಾಯಕನ ಪಾತ್ರದಲ್ಲಿ ಅಭಿನಯಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ತಮಿಳು ಚಿತ್ರರಂಗದಲ್ಲಿ ಭರ್ಜರಿ ಯಶಸ್ಸು ಕಂಡಿರುವ ನಟ, ನಿರ್ದೇಶಕ, ನಿರ್ಮಾಪಕ ಧನುಷ್ ತಮ್ಮ ಮಾವನ ಚಿತ್ರವಾಗಿರುವ ತಲೈವಾರನ್ನು ತಾವೇ ನಿರ್ದೇಶನ ಮಾಡಬೇಕೆಂಬ ಆಸೆಯನ್ನು ಹೊಂದಿದ್ದಾರೆ. ಇದಕ್ಕಾಗಿ ಅದ್ಬುತ ಕಥೆಯೊಂದನ್ನು ರಚಿಸಿರುವ ಅವ್ರು ಮಾವ ರಾಜನಿಕಾಂತರ ಮುಂದೆ ಕಥೆ ವಿವರಿಸಿದಾಗ ರಜನೀಕಾಂತ್ ಥ್ರಿಲ್ ಆಗಿದ್ದಾರಂತೆ. ಕಥೆಯು ವಿಭಿನ್ನ ಹಾಗೂ ರೋಮಾಂಚನಕಾರಿಯಾಗಿದೆ.

ಕಥೆಯನ್ನು ಮೆಚ್ಚಿರುವ ರಜನೀಕಾಂತ್ ಬರೀ ತಮಿಳಿನಲ್ಲಿ ಮಾತ್ರವಲ್ಲ ಕನ್ನಡದಲ್ಲೂ ಈ ಸಿನಿಮಾ ಮಾಡಲು ಉತ್ಸುಕರಾಗಿದ್ದಾರೆ. ಈ ಚಿತ್ರದಲ್ಲಿ ಎರಡು ನಾಯಕರ ಪಾತ್ರ ಇದೆ. ಅದಕ್ಕೆ ಸುದೀಪ್ ಅವರೇ ಸೂಕ್ತ ವ್ಯಕ್ತಿ ಎಂದು ರಜನೀಕಾಂತ್ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಧನುಷ್ ಗೆ ಸುದೀಪ್ ಅವರನ್ನು ಸಂಪರ್ಕ ಮಾಡಲು ಆದೇಶ ನೀಡಿದ್ದಾರೆ. ಮಾನ ಬಯಕೆಯಂತೆ ಶೀಘ್ರದಲ್ಲಿ ಚಿತ್ರದ ಕುರಿತು ಸುದ್ದೆಪ್ ಜೊತೆ ಧನುಷ್ ಮಾತನಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ರಜನೀಕಾಂತ್ ಹಾಗೂ ಸುದೀಪ್ ಇಬ್ಬರು ನಟಿಸಿದರೆ ಆ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ದೂಳೆಬ್ಬಿಸುವುದರಲ್ಲಿ ಎರಡು ಮಾತಿಲ್ಲ. ಕೋಟ್ಯಂತರ ಅಭಿಮಾನಿಗಳೇ ಈ ಚಿತ್ರಕ್ಕಾಗಿ ಅತ್ಯಂತ ಉತ್ಸುಕರಾಗಿದ್ದಾರೆ. ಅತಿ ಬೇಗ ಶೂಟಿಂಗ್ ಪ್ರಾರಂಭವಾಗಲಿ ಎನ್ನುವ ಬಯಕೆ ಅಭಿಮಾನಿಗಳದ್ದು. ಸದ್ಯ ರಾಜಕೀಯಕ ಪ್ರವೇಶ ಮಾಡಿರುವ ರಜನೀಕಾಂತ್ ಚಿತ್ರಕ್ಕಾಗಿ ಯಾವಾಗ ಸಮಯ ಬಿಡುವು ಮಾಡಿಕೊಳ್ಳಲಿದ್ದಾರೆ ಎಂಬುದನ್ನು ಕಾದುನೋಡಬೇಕಾಗಿದೆ.

NO COMMENTS

LEAVE A REPLY