ಫೀಲ್ಡ್ ಮಾರ್ಷಿಯಲ್ ಕಾರ್ಯಪ್ಪರವರ 119ನೇ ಹುಟ್ಟು ಹಬ್ಬ ಮೈಸೂರು ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ...

ಫೀಲ್ಡ್ ಮಾರ್ಷಿಯಲ್ ಕಾರ್ಯಪ್ಪರವರ 119ನೇ ಹುಟ್ಟು ಹಬ್ಬ ಮೈಸೂರು ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಜರುಗಿತು.

300
0
SHARE

ಫೀಲ್ಡ್ ಮಾರ್ಷಿಯಲ್ ಕಾರ್ಯಪ್ಪರವರ 119ನೇ ಹುಟ್ಟು ಹಬ್ಬ ಮೈಸೂರು ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಜರುಗಿತು.

ಜನಪ್ರಿಯ ಶಾಸಕರಾದ ಶ್ರೀ ಎಂ ಕೆ ಸೋಮಶೇಖರ್ ,ಶ್ರೀ ವಾಸು,ಮಾಜಿ ಮಹಾಪೌರರಾದ ಶ್ರೀ ರವಿಕುಮಾರ್.ಶ್ರೀ ಪುರುಷೋತ್ತಮ್ ,ಶ್ರೀಕಂಠಯ್ಯ ಹಾಗೂ ಕೊಡವ ಸಮಾಜದ ಅಧ್ಯಕ್ಷ ನಾಣಯ್ಯ ಮತ್ತಿತರ ಕೊಡವ ಸಮಾಜದ ನಾಯಕರುಗಳು ಉಪಸ್ಥಿತರಿದ್ದರು.ಪುಷ್ಪಾರ್ಚನೆ ಮಾಡಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಂ ಕೆ ಸೋಮಶೇಖರ್ ರವರು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ರವರು ಕೇವಲ ಕನ್ನಡಿಗರಲ್ಲ,ಕೊಡವರಲ್ಲ,ಅವರೊಬ್ಬ ಮಹಾನ್ ದೇಶಪ್ರೇಮಿ,ಮೂರು ವಿಭಾಗಗಳಾದ ಭೂಸೇನೆ,ವಾಯುಸೇನೆ,ಜಲಸೇನೆಗಳ ಮಹಾದಂಡನಾಯಕರಾಗಿ ಸೇವೆ ಸಲ್ಲಿಸಿರುವುದು ಇತಿಹಾಸ.ಸಶಸ್ತ್ರ ಪಡೆಗಳು ದೇಶದ ಗಡಿಯಲ್ಲಿ ಕೊರೆವ ಚಳಿಯಲ್ಲಿ ಸೇವೆ ಮಾಡಿದರೇ ನಾವೆಲ್ಲರೂ ದೇಶದೊಳಗೆ ನೆಮ್ಮದಿಯಾಗಿರಲು ಸಾಧ್ಯ,ಫೀಲ್ಡ್ ಮಾರ್ಷಿಯಲ್ ಕಾರ್ಯಪ್ಪರವರ ಆ ಸಾಧನೆಯೇ ಇವತ್ತಿನ ಕೊಡಗಿನ ಜನತೆಗೆ ಸೇನೆಗೆ ಸೇರಲು ಸ್ಪೂರ್ತಿಯಾಗಿದ್ದಾರೆ.ಅವರ ಪ್ರತಿಮೆಯನ್ನು ಸರ್ಕಾರದ ವತಿಯಿಂದಲೇ ನಿರ್ಮಿಸಿ,ಯುದ್ಧದ ಸನ್ನಿವೇಶವನ್ನು ಬಿಂಬಿಸುವ ಚಿತ್ರವನ್ನು ನಿರ್ಮಿಸುವ ಕಾರ್ಯವನ್ನು ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತಂದು ಮಾಡುವಲ್ಲಿ ಪ್ರಯತ್ನಿಸುತ್ತೇನೆ ಎಂದು ತಿಳಿಸಿದರು.ಅಭಿಮಾನಿಗಳು ಸಿಹಿ ಹಂಚಿ ಸ಼ಂತೋಷ ಪಟ್ಟರು.

NO COMMENTS

LEAVE A REPLY